ಚಿಕಿತ್ಸೆಗಾಗಿ ಮುಖ್ಯಮಂತ್ರಿ ಅಮೆರಿಕಕ್ಕೆ
ತಿರುವನಂತಪುರ: ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಮುಂಜಾನೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕಿತ್ಸೆ ಕಳೆದು ಜುಲೈ 18ರ ಮೊದಲು ಮುಖ್ಯಮಂತ್ರಿ ಹಿಂತಿರುಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾಗಲೀ, ಸಚಿವರಾಗಲೀ ವಿದೇಶಕ್ಕೆ ಹೋಗಲು ಕೇಂದ್ರ ಸರಕಾರದ ಅನುಮತಿ ಪಡೆಯಬೇಕಾಗಿದೆ. ಆದರೆ ಚಿಕಿತ್ಸೆಗೆ ಹೋಗುವುದಾದಲ್ಲಿ ಕೇಂದ್ರ ಸರಕಾರದ ಅನುಮತಿ ಕಡ್ಡಾಯವಲ್ಲ. ಅಮೆರಿಕಾಕ್ಕೆ ಹೋಗುವ ವಿಷಯವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೂ ತಿಳಿಸಿದ್ದಾರೆ.