ಚಿನ್ನ ದರದಲ್ಲಿ ಸಾರ್ವಕಾಲಿಕ ದಾಖಲೆ: ಇತಿಹಾಸದಲ್ಲೇ ಪ್ರಥಮವಾಗಿ ಐವತ್ತು ಸಾವಿರ ರೂ. ದಾಟಿದ ಬೆಲೆ
ಕಾಸರಗೋಡು: ಇತಿಹಾಸ ದಲ್ಲೇ ಇದೇ ಪ್ರಥಮವಾಗಿ ಚಿನ್ನದ ಬೆಲೆ ಪವನ್ಗೆ 50,000 ರೂ. ದಾಟಿದೆ. ಇದೊಂದು ಸಾರ್ವ ಕಾಲಿಕ ದಾಖಲೆಯಾಗಿದೆ.
ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ದರ 6300 ರೂ.ಗೇರಿದೆ. ಕೇರಳದಲ್ಲಿ ಈ ಬೆಲೆಯಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಪವನ್ ಒಂದರ ದರ ಇಂದು ೫೦,೪೦೦ ರೂ.ಗೇರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಉಂಟಾಗಿರುವ ಏರಿಕೆಯೇ ಭಾರತ ದಲ್ಲೂ ದರ ಹೆಚ್ಚಳಕ್ಕೆ ಕಾರಣ ವಾಗಿದೆ. ಚಿನ್ನದ ಬೆಲೆಯೇರಿಕೆ ಹೂಡಿಕೆ ದಾರರಿಗೆ ಸಂತಸ ತಂದಿದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಮದುವೆ ಇತ್ಯಾದಿ ಶುಭ ಕಾರ್ಯ ಗಳು ಹೆಚ್ಚಾಗಿ ನಡೆಯುತ್ತಿದ್ದು, ಇದು ಗ್ರಾಹಕರಲ್ಲಿ ಕಳವಳ ಸೃಷ್ಟಿಸುವಂತೆ ಮಾಡಿದೆ. ಚಿನ್ನದ ಜತೆ ಬೆಳ್ಳಿ ದರದಲ್ಲೂ ಏರಿಕೆ ಉಂಟಾಗತೊಡಗಿದೆ.