ಚಿನ್ನ ವ್ಯವಹಾರ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಯುವಕರಿಬ್ಬರಿಗೆ ಗಾಯ; ಓರ್ವ ಗಂಭೀರ

ಕಾಸರಗೋಡು: ಗಲ್ಫ್‌ನಿಂದ ಕಳುಹಿಸಿಕೊಡಲಾಗಿದ್ದ ಚಿನ್ನವನ್ನು ಅದರ ಮಾಲಕನಿಗೆ ಹಸ್ತಾಂತರಿಸದೆ ವಂಚನೆಗೈದಿರುವುದಾಗಿ ಆರೋಪಿಸಲಾಗುತ್ತಿರುವ ಯುವಕರಿಬ್ಬರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಅವರನ್ನು ಗಾಯಗೊಳಿಸಿದ ಘಟನೆ ಸೂರ್ಲಿನಲ್ಲಿ ನಿನ್ನೆ ರಾತ್ರಿ ಸುಮಾರು ೧೧ ಗಂಟೆ ವೇಳೆ ನಡೆದಿದೆ.

ಸೂರ್ಲು ನಿವಾಸಿಗಳಾದ ಯುವಕರಿಬ್ಬರು ಈ ಅಪಘಾತದಲ್ಲಿ  ಗಂಭೀರ ಗಾಯಗೊಂಡಿದ್ದು, ಅದರಲ್ಲಿ ಓರ್ವನನ್ನು ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ಈತನ ಸ್ಥಿತಿ ಗಂಭೀರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಸಂಚರಿಸುತ್ತಿದ್ದ ವೇಳೆ ಇನ್ನೋವಾ ಕಾರಿನಲ್ಲಿ ಬಂದ ತಂಡ ಆ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿದೆ ಯೆಂದು ಆರೋಪಿಸಲಾಗಿದೆ. ಆಗ ನಿಯಂತ್ರಣ ತಪ್ಪಿದ ಸ್ಕೂಟರ್ ಅಲ್ಲೇ ಪಕ್ಕದಲ್ಲಿ ಬರುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನಕ್ಕೂ ಢಿಕ್ಕಿ ಹೊಡೆದಿದೆ.  ಈ ಅಪಘಾತದಲ್ಲಿ ಗಾಯಗೊಂಡ ಓರ್ವನ ಕೈಯ ಎಲುಬು ಮುರಿದಿದ್ದು, ಆತನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇನ್ನೋರ್ವನನ್ನು ಮಂಗಳೂರಿಗೆ ಸಾಗಿಸಲಾಗಿದೆ. ಯುವಕರು  ಸ್ಕೂಟರ್‌ನಲ್ಲಿ  ಸಂಚರಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ಕಾರನ್ನು ಅಡ್ಡವಾಗಿ ಓಡಿಸಿ ಢಿಕ್ಕಿ ಹೊಡೆಸಿ ರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೀಡಾದ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page