ಚುನಾವಣೆ ಗ್ರಾಮಸಭೆ: ಮತದಾರರ ಪಟ್ಟಿಯಲ್ಲಿ 5563 ಮತದಾರರು ಮೃತಪಟ್ಟಿರುವುದಾಗಿ ಪತ್ತೆ
ಕಾಸರಗೋಡು: ಚುನಾವಣೆ ಗ್ರಾಮಸಭೆ ನಡೆಸಿರುವ ಕಾರಣ 5563 ಮಂದಿ ಮತದಾರರು ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಯಿತು. 2324 ಬೂತ್ ಲೆವೆಲ್ ಏಜೆಂಟರ್ಗಳು, 2724 ಮತದಾರರು ಸಭೆಯಲ್ಲಿ ಭಾಗವಹಿಸಿದರು. ಮಂಜೇಶ್ವರ ಮಂಡಲದಲ್ಲಿ ನಡೆದ ಗ್ರಾಮಸಭೆಯಲ್ಲಿ ರಾಜಕೀಯ ಪಕ್ಷದ 423 ಪ್ರತಿನಿಧಿಗಳು, 384 ಮತದಾರರು ಭಾಗವಹಿಸಿದರು. ಇಲ್ಲಿ ಒಟ್ಟು 991 ಮಂದಿ ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಯಿತು. ಕಾಸರಗೋಡು ಮಂಡಲದಲ್ಲಿ 1161 ಮಂದಿ ಸಾವಿಗೀಡಾಗಿರುವುದಾಗಿ ಪತ್ತೆಹಚ್ಚಲಾಗಿದೆ. ಉದುಮದಲ್ಲಿ 1291, ಕಾಞಂಗಾಡ್ ಮಂಡಲದಲ್ಲಿ 1135, ತೃಕ್ಕರಿಪುರ ಮಂಡಲದಲ್ಲಿ 985 ಮಂದಿ ಮೃತಪಟ್ಟಿರುವುದಾಗಿ ಪತ್ತೆಹಚ್ಚಲಾಗಿದೆ. ಮೃತಪಟ್ಟವರನ್ನು ಹಾಗೂ ಸ್ಥಳಾಂತರಗೊAಡವರನ್ನು ಮತದಾರರ ಯಾದಿಯಿಂದ ತೆರವುಗೊಳಿಸಲಿರುವ ಕ್ರಮ ಮುಂದಿನ ದಿನಗಳಲ್ಲಿ ನಡೆಸಲಾಗುವುದು.