ಚುನಾವಣೆ ಸಮಯದಲ್ಲಿ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣ: ಇಬ್ಬರಿಗೆ 2 ವರ್ಷ ಕಠಿಣ ಸಜೆ, ದಂಡ
ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಸಾಗಿಸುತ್ತಿದ್ದ 4.8 ಗ್ರಾಂ ಮೆಥಾಫಿಟಾಮಿನ್ ವಶಪಡಿಸಿದ ಪ್ರಕರಣದಲ್ಲಿ ಇಬ್ಬರಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ದಂಡ ಶಿಕ್ಷೆ ಹೇರಿದೆ. ಪಡನ್ನಕ್ಕಾಡ್ ಕರುವಳಂ ಶೆರೀಫ್ ಮಂಜಿಲ್ ನಿವಾಸಿ ಸಿ.ಎಚ್. ಸಾಬಿರ್ (29), ಪಡನ್ನಕ್ಕಾಡ್ ನಶ್ವರಂ ನಿವಾಸಿ ಸಿ.ಪಿ. ಜಮಾಲ್ (27) ಎಂಬವರಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಧೀಶೆ ಕೆ. ಪ್ರಿಯ ಈ ಶಿಕ್ಷೆ ಘೋಷಿಸಿದ್ದಾರೆ. ದಂಡ ಪಾವತಿಸದಿದ್ದರೆ ಮೂರು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.
2021 ಮಾರ್ಚ್ 29ರಂದು ಬೇಕಲ ಕೋಟೆಕುನ್ನುನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಕರ್ತವ್ಯದಲ್ಲಿದ್ದ ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ಪಿ.ವಿ. ರತ್ನಾಕರನ್ (ಜಿಎಸ್ಟಿ ಅಧಿಕಾರಿ) ನೇತೃತ್ವದಲ್ಲಿರುವ ತಂಡ ರಾತ್ರಿ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಮಧ್ಯೆ ಕಾಸರಗೋಡು ಭಾಗದಿಂದ ತಲುಪಿದ ಕಾರಿನಲ್ಲಿ ಮಾದಕ ಪದಾರ್ಥ ಸಹಿತ ಮೂರು ಮಂದಿಯನ್ನು ಕಸ್ಟಡಿಗೆ ತೆಗೆಯಲಾ ಗಿತ್ತು. ಬಳಿಕ ಪೊಲೀಸರಿಗೆ ನೀಡಿದ ಮಾಹಿತಿಯ ಆಧಾರದಲ್ಲಿ ಬೇಕಲ ಎಸ್ಐ ಆಗಿದ್ದ ಸಿ.ಎಚ್. ಸಾಬಿರ್, ಸಿ.ಪಿ. ಜಮಾಲ್, ಸಿ.ಸಿ. ಲತೀಶ್, ಎಎಸ್ಐ, ಸಿವಿಲ್ ಪೊಲೀಸರು ಎಂಬಿವರ ನೇತೃತ್ವದಲ್ಲಿರುವ ತಂಡ ಆರೋಪಿಗಳನ್ನು ಬಂಧಿಸಿತ್ತು. ಮುಂದಿನ ತನಿಖೆ ನಡೆಸಿ ಬೇಕಲ ಇನ್ಸ್ಪೆಕ್ಟರ್ ಆಗಿದ್ದ ಟಿ. ಪ್ರದೀಶ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಒಂದನೇ ಆರೋಪಿ ಶಾನವಾಸ್ ವಿಚಾರಣೆ ವೇಳೆ ಮೃತಪಟ್ಟಿದ್ದನು. ಪ್ರೋಸಿಕ್ಯೂಷನ್ಗೆ ಬೇಕಾಗಿ ಹೆಚ್ಚುವರಿ ಸರಕಾರಿ ನ್ಯಾಯವಾದಿ ಜಿ. ಚಂದ್ರಮೋಹನ್, ಚಿತ್ರಕಲಾ ಹಾಜರಾಗಿದ್ದರು.