ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು: ಹೊಂಡ ಮುಚ್ಚುವ ಕೆಲಸ ಆರಂಭ
ಬದಿಯಡ್ಕ: ಹೊಂಡಗಳು ಸೃಷ್ಟಿಯಾಗಿ ಶೋಚನೀಯಾವಸ್ಥೆ ಯಲ್ಲಿರುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ದುರಸ್ತಿಗೆ ಸರಕಾರ ಹಣ ಮಂಜೂರು ಮಾಡಿದೆ. ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಲು ೬ ಲಕ್ಷ ರೂಪಾಯಿ ಹಾಗೂ ಪುನರ್ ನಿರ್ಮಾಣಕ್ಕೆ ೩೫ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದೀಗ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿ ರುವ ಹೊಂಡಗಳನ್ನು ಶೀಘ್ರ ಮುಚ್ಚಲು ತೀರ್ಮಾನಿಸಲಾಗಿದೆ. ಮಳೆಗಾಲ ಕೊನೆಗೊಂಡ ಬಳಿಕ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ಆರಂಭಿಸಲಾ ಗುವುದು. ಇದರಂತೆ ರಸ್ತೆಯ ಹೊಂಡ ಮುಚ್ಚುವ ಕೆಲಸ ಇಂದು ಆರಂಭಗೊಂಡಿದೆ.
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಶೋಚನೀಯಾ ವಸ್ಥೆಯನ್ನು ಪ್ರತಿಭಟಿಸಿ ಕಾಂಗ್ರೆಸ್, ಬಿಜೆಪಿ ಸಹಿತ ರಾಜಕೀಯ ಪಕ್ಷಗಳು ಇತ್ತೀಚೆಗೆ ಧರಣಿ ನಡೆಸಿದ್ದವು.