ಜನಪ್ರತಿನಿಧಿಗಳು ಕರಾವಳಿ ಪ್ರದೇಶದ ಜನರನ್ನು ನಿರ್ಲಕ್ಷಿಸುವುದು ನಿಲ್ಲಿಸಬೇಕು: ಇಲ್ಲದಿದ್ದರೆ ತೀವ್ರ ಹೋರಾಟ- ಕೇರಳ ಮತ್ಸ್ಯ ಪ್ರವರ್ತಕ ಸಂಘ
ಉಪ್ಪಳ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಮಂಗಲ್ಪಾಡಿ ಪಂಚಾಯತ್‌ನ ವ್ಯಾಪ್ತಿಯ ಶಾರದಾ ನಗರ, ಹನುಮಾನ್ ನಗರ ಮತ್ತು ಶಿವಾಜಿ ನಗರದ ಕಡಲೆÆ್ಕರೆತ ಪ್ರದೇಶಗಳಿಗೆ ಕೇರಳ ಮಲ್ಸ ್ಯ ಪ್ರವರ್ತಕ ಸಂಘ ನೇತಾರರು ಭೇಟಿ ನೀಡಿದರು. ತೀವ್ರವಾದ ಕಡಲÉÆ್ಕರೆತ ಇದ್ದರೂ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕ, ಕಾಸರಗೋಡು ಸಂಸದ ಸ್ಥಳಕ್ಕೆ ಭೇಟಿ ನೀಡದಿ ರುವುದು ಅತ್ಯಂತ ದೊಡ್ಡ ನಾಚಿಕೆ ಗೇಡು ಎಂದು ಅವರು ಆರೋಪಿ ಸಿದರು. ಜನ ಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಲ್ಲಿನ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಚಿತ್ರವಾ ಗಿದೆ. ಶಾರದಾ ನಗರದಲ್ಲಿ ೪೦ ವರ್ಷಗಳಿಂದ ಯಾವುದೇ ರಸ್ತೆ ಕಾಮಗಾರಿ ನಡೆದಿಲ್ಲ. ಈ ಪ್ರದೇಶದ ರಸ್ತೆಗಳು ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಕೂಡ ತಲುಪಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಜಿಲ್ಲಾಧಿ ಕಾರಿಗಳು ತಕ್ಷಣ ಈ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭೇಟಿ ನೀಡಿದ ತಂಡ ಆಗ್ರಹಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳ *ಜನರನ್ನು ಒಗ್ಗೂಡಿಸಿ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ರಾಜ್ಯ ಅಧ್ಯಕ್ಷ ಪೀತಾಂಬರನ್, ಜಿಲ್ಲಾಧ್ಯಕ್ಷ ಬಾಲಕೃಷ್ಣನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕೆ.ಪಿ, ಜಿಲ್ಲಾ ಕಾರ್ಯದರ್ಶಿ ವಿನೋದನ್ ಕುಂಬಳೆ, ಬಿಜೆಪಿ ನಾಯಕ ಕೆ.ಪಿ. ವಲ್ಸರಾಜ್ ಭೇಟಿ ನೀಡಿದರು.