ಜನವಾಸ ಕೇಂದ್ರ ಬಳಿ ಅನಧಿಕೃತವಾಗಿ ಕಾರ್ಯಾಚರಿಸುವ ಹಂದಿ ಫಾರ್ಮ್ ವಿರುದ್ಧ ಎನ್‌ಫೋರ್ಸ್‌ಮೆಂಟ್ ಕ್ರಮ
ವರ್ಕಾಡಿ: ಪಂಚಾಯತ್‌ನ ಬೇಕರಿ ತೌಡುಗೋಳಿ ಮುಖ್ಯರಸ್ತೆಯ ಬಳಿ ಪರವಾನಗಿ ರಹಿತವಾಗಿ ಕಾರ್ಯಾಚರಿಸುವ ಖಾಸಗಿ ಹಂದಿ ಫಾರ್ಮ್‌ಗೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆ ಯಲ್ಲಿ ಗಂಭೀರ ಕಾನೂನು ಉಲ್ಲಂಘನೆ ನಡೆದಿರುವುದಾಗಿ ಪತ್ತೆಹಚ್ಚಲಾಗಿದೆ. ೫೦೦ಕ್ಕೂ ಅಧಿಕ ಹಂದಿಗಳನ್ನು ಸಾಕುವ ಫಾರ್ಮ್‌ನಿಂ ದಿರುವ ಮಲಿನ ಜಲ ಫಾರ್ಮ್ ಮಾಲಕನ ಸ್ಥಳದಲ್ಲಿಯೇ ಬಹಿರಂಗ ವಾಗಿ ಹೊಂಡಕ್ಕೆ ಹರಿಯಬಿಡುವು ದನ್ನು ಪತ್ತೆಹಚ್ಚಲಾಗಿದೆ. ಇದರಿಂದ ಕೆಳಗಿನ ಸ್ಥಳಗಳಲ್ಲಿ ಹರಿಯುವ ಜಲಮೂಲಗಳಿಗೆ ಫಾರ್ಮ್‌ನ ಮಲಿನ ಜಲ ಹರಿದು ಸೇರುತ್ತದೆ ಎಂದು ಪತ್ತೆಹಚ್ಚಲಾಗಿದೆ. ಇಲ್ಲಿ ಸ್ಥಾಪಿಸಿದ ಬಯೋಗ್ಯಾಸ್ ಪ್ಲಾಂಟ್ ಚಟುವಟಿಕಾರಹಿತವಾಗಿದೆ. ಪರಿಸರ ದವರಿಗೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸುವ ಸಂಸ್ಥೆಯಿಂದ ಆದಷ್ಟು ಬೇಗ ಹಂದಿಗಳನ್ನು ತೆರವು ಗೊಳಿಸಲು ಹಾಗೂ ವೈಜ್ಞಾನಿಕವಾಗಿ ಪರವಾನಗಿ ಸಹಿತವಾಗಿ ಮಾತ್ರವೇ ಪುನರಾರಂಭಿಸಬೇಕೆಂದು ಮಾಲಕನಿಗೆ ತಿಳಿಸಿದ್ದು, ಉಲ್ಲಂಘನೆಗಾಗಿ ಕೇರಳ ಪಂಚಾಯತ್‌ರಾಜ್ ಆಕ್ಟ್ 219ಕೆ ಪ್ರಕಾರ 25,000 ರೂ. ದಂಡ ಹೇರಲಾಯಿತು. ಕಾನೂನು ಉಲ್ಲಂಘನೆ ಪುನರಾವರ್ತಿಸಿದರೆ ಕಾನೂನು ಕ್ರಮಗಳೊಂದಿಗೆ ಮುಂದುವರಿಯಲು ಪಂಚಾಯತ್‌ಗೆ ನಿರ್ದೇಶ ನೀಡಲಾಯಿತು.
ವರ್ಕಾಡಿಯ ಒಂದು ಗೋದಾಮಿನಿಂದ ನಿಷೇಧಿತ ಕುಡಿಯುವ ನೀರು ಬಾಟ್ಲಿಗಳನ್ನು ವಶಪಡಿಸಿ 25000 ರೂ. ದಂಡ ಹೇರಲಾಯಿತು. ತಪಾಸಣೆಯಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮುಖಂಡ ಕೆ.ವಿ. ಮುಹಮ್ಮದ್ ಮದನಿ, ಅಸಿಸ್ಟೆಂಟ್ ಸೆಕ್ರೆಟರಿ ಎಂ.ಕೆ. ನಿಶಾಂತ್, ಹೆಲ್ತ್ ಇನ್ಸ್‌ಪೆಕ್ಟರ್ ಪಿ.ಕೆ. ಜಾಸ್ಮಿನ್, ಕ್ಲರ್ಕ್ ಆರ್. ಹರಿತ, ಸದಸ್ಯ ಇ.ಕೆ. ಫಾಸಿಲ್ ಭಾಗವಹಿಸಿದರು.