ಜ್ಯುವೆಲ್ಲರಿ ವರ್ಕ್ಶಾಪ್ ಮಾಲಕ ನಿಧನ
ಮುಳ್ಳೇರಿಯ: ಪೇಟೆಯಲ್ಲಿ ಜ್ಯುವೆಲ್ಲರಿ ಕೆಲಸದ ಅಂಗಡಿ ಹೊಂದಿದ್ದ ಮುಳ್ಳೇರಿಯ ಶ್ರೀ ಶಾರದ ನಿಲಯ ನಿವಾಸಿ ದಿ| ಕುಂಞಂಣ್ಣ ಆಚಾರ್ಯರ ಪುತ್ರ ಟಿ. ರಾಧಾಕೃಷ್ಣ ಆಚಾರ್ಯ (೬೫) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಇವರು ಚಿನ್ನದ ಕೆಲಸಗಾರರಾಗಿದ್ದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ರಂಜಿತ್, ಶ್ರುತಿ, ಅಳಿಯ ನಿರಂಜನ್, ಸೊಸೆ ಸ್ವಾತಿ, ಸಹೋದರಿಯರಾದ ಸುನಂದ, ಶಶಿಕಲಾ, ವಿಶಾಲಾಕ್ಷಿ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.