ಜ್ವರ ಬಾಧಿಸಿ ಎರಡು ತಿಂಗಳು ಚಿಕಿತ್ಸೆಯಲ್ಲಿದ್ದ ಬಾಲಕ ಮೃತ್ಯು

ಕಾಸರಗೋಡು: ಜ್ವರ ಬಾಧಿಸಿ ಎರಡು ತಿಂಗಳು  ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟನು.

ಬೋವಿಕ್ಕಾನ ನಿವಾಸಿ ಬಿ.ಕೆ. ನಾಜುದ್ದೀನ್-ಸಾಜಿದ ದಂಪತಿಯ ಪುತ್ರ ಮಿಸ್ಬಾಹ್ (13) ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದನು. ಅಸೌಖ್ಯ ಬಾಧಿಸಿದ್ದ ಹಿನ್ನೆಲೆಯಲ್ಲಿ ಎಪ್ರಿಲ್ 18ರಂದು ಬಾಲಕ ಊರಿಗೆ ಬಂದಿ ದ್ದನು. ಈತ ಕುವೈತ್‌ನ ಜಾಬ್ರಿಯ ಇಂಡ್ಯನ್ ಸ್ಕೂಲ್‌ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾ ಗಿದ್ದನು. ಊರಿನಲ್ಲಿ ಗಣ್ಯ  ವ್ಯಕ್ತಿಗಳಾದ ಫ್ರೀ ಕುವೈತ್ ಅಬ್ದುಲ್ಲ ಹಾಜಿ ಹಾಗೂ ದಿ| ಬಿ.ಕೆ. ಮಹಮ್ಮದ್ ಕುಂಞಿ ಎಂಬ ವರ ಮೊಮ್ಮಗನಾಗಿದ್ದಾನೆ. ಮೃತ ಬಾಲಕ ಸಹೋದರಿ ಸದಾ ಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಮಿಸ್ಬಾಹ್‌ನ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.

RELATED NEWS

You cannot copy contents of this page