ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು

ಕುಂಬಳೆ: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ೬ ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಶಿರಿಯಾ ಬತ್ತೇರಿಯ ಖಲೀಲ್-ಹಪ್ಸ ದಂಪತಿಯ ಪುತ್ರಿ ಫಾತಿಮಾ (6 ಮೃತಪಟ್ಟ ಬಾಲಕಿ. ಉಪ್ಪಳ ಎ.ಜೆ.ಐ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಒಂದು ವಾರದ ಹಿಂದೆ ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗಿತ್ತು. ಅದರ ಬೆನ್ನಲ್ಲೇ ಜ್ವರ ಉಲ್ಭಣಿಸಿದ್ದು, ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಮಧ್ಯಾಹ್ನ ಬಾಲಕಿ ಮೃತಪಟ್ಟಿದ್ದಾಳೆ.  ಮೃತಳು ತಂದೆ, ತಾಯಿ, ಸಹೋದರ ಸಿರಾಜ್ ಮೊದಲಾದವರನ್ನು ಅಗಲಿದ್ದಾಳೆ.

RELATED NEWS

You cannot copy contents of this page