ಟಿಡಿಎಫ್ ಡೈಮಂಡ್ ಆಂಡ್ ಗೋಲ್ಡ್ ಪ್ರದರ್ಶನ ಉದ್ಘಾಟನೆ
ಕಾಸರಗೋಡು: ದಿ ಡೈಮಂಡ್ ಫ್ಯಾಕ್ಟರಿ ಗ್ರಾಹಕರ ಸೌಕರ್ಯಾರ್ಥ ಕಾಸ ರಗೋಡಿನಲ್ಲಿ ಆರಂಭಿಸಿದ ಚಿನ್ನ, ವಜ್ರಾಭರಣಗಳ ಮಳಿಗೆಯ ಮೂರು ದಿನಗಳ ಬೃಹತ್ ಪ್ರದರ್ಶನ ನಿನ್ನೆ ಉದ್ಘಾಟನೆಗೊಂಡಿತು. 29ರವರೆಗೆ ಪ್ರದರ್ಶನ ನಡೆಯಲಿದೆ.
ಕಾಸರಗೋಡು ನಗರದ ಸಿಟಿ ಟವರ್ ಹೋಟೆಲ್ನಲ್ಲಿ ನಿನ್ನೆ ಎನ್.ಎ. ಅಬೂಬಕ್ಕರ್ ಉದ್ಘಾಟಿಸಿದರು. ಟ್ಯಾಕ್ಸ್ ಪ್ರಾಕ್ಟೀಶನರ್ ಪೆರುಮನ ಸಂದೀಪ್ ದೀಪ ಬೆಳಗಿಸಿದರು. ಮೂರು ದಿನಗಳ ಕಾಲ ಬೆಳಿಗ್ಗೆ 10.30ರಿಂದ ರಾತ್ರಿ 8 ಗಂಟೆ ವರೆಗೆ ನಡೆಯುವ ಪ್ರದರ್ಶನದಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಆಭರಣಗಳನ್ನು ವೀಕ್ಷಿಸಿ ಖರೀದಿಸ ಬಹುದಾಗಿದೆ. ವಿವಿಧ ಡಿಸೈನ್ಗಳ ಚಿನ್ನ ಹಾಗೂ ವಜ್ರಾಭರಣಗಳನ್ನು ಪ್ರದರ್ಶ ನದಲ್ಲಿ ರಿಸಲಾಗುತ್ತಿದ್ದು, ಗ್ರಾಹಕರಿಗೆ ಆಯ್ದು ಖರೀದಿಸಲು ಬೇಕಾದ ಸೌಕರ್ಯ ಏರ್ಪಡಿಸಲಾಗಿದೆ. ಚಿನ್ನ, ವಜ್ರಾಭರಣಗಳ ಸೌಂದರ್ಯ ಹಾಗೂ ಗುಣಮಟ್ಟ ವನ್ನು ಅರಿತುಕೊಳ್ಳಲು ಈ ಪ್ರದರ್ಶನ ಪ್ರಯೋಜನ ಕಾರಿಯಾ ಗಲಿದೆ. ಆಭರಣಗಳ ತಯಾರಿ ಮಜೂರಿ 100 ಶೇ. ಉಚಿತವಾಗಿರು ವುದು. ಮದುವೆ ಸಹಿತ ಸಮಾರಂಭಗಳಿಗೆ ಆಭರಣ ಖರೀದಿಸುವವರಿಗಾಗಿ ವಿಶೇಷ ಆಫರ್ಗಳನ್ನು ನೀಡಲಾಗುವುದೆಂದು ಮಳಿಗೆಯ ನಿರ್ದೇಶಕ ರಾದ ಗೌತಂ ಸಿಂಘ್ವಿ ಹಾಗೂ ಪ್ರಸನ್ನ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.