ಡಾರ್ಕ್‌ವೆಬ್ ಮೂಲಕ ಕೇರಳಕ್ಕೆ ಮಾದಕ ದ್ರವ್ಯ ಪೂರೈಸುವ ಸೂತ್ರಧಾರ ಸೆರೆ
ಕಾಸರಗೋಡು: ‘ಕೆಟ್ಟಾ ಮೆಲೋನ್’ ಎಂಬ ಹೆಸರಿನ ಡಾರ್ಕ್ ವೆಬ್ ಮೂಲಕ ಕೇರಳಕ್ಕೆ ಮಾದಕದ್ರವ್ಯ ವಿತರಿಸುವ ಜಾಲದ ಪ್ರಧಾನ ಸೂತ್ರ ಧಾರನನ್ನು ನರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಕೊಚ್ಚಿ ಘಟಕ ಬಂಧಿಸುವಲ್ಲಿ ಸಫಲ ವಾಗಿದೆ. ಇದರ ಜೊತೆಗೆ ಆತನ ಸಹಾಯಕ ನೋರ್ವನನ್ನೂ ವಶಕ್ಕೆ ತೆಗೆದುಕೊಳ್ಳ ಲಾಗಿದೆ. ಮೂವಾಟುಪುಳ ನಿವಾಸಿ ಎಡಿಸನ್ ಎಂಬಾತ ಬಂಧಿತ ಸೂತ್ರ ಧಾರ. 1127 ಬ್ಲೋಟ್ ಎಲ್‌ಎಸ್‌ಡಿ, 131.66 ಗ್ರಾಂ ಕೆಟಾಮೈನ್ ಮತ್ತು ರಿಫ್ಟೋ ಕರೆನ್ಸಿಯನ್ನು ಆತನಿಂದ ಪತ್ತೆಹಚ್ಚಲಾಗಿದೆ. ವಶಪಡಿಸಲಾದ ಮಾದಕದ್ರವ್ಯಕ್ಕೆ ಸುಮಾರು 35 ಲಕ್ಷರೂ. ಅಂದಾಜಿಸಲಾಗಿದೆ.
ಇನ್ನು ಕ್ರಿಫ್ಟೋ ಕರೆನ್ಸಿಗೆ 70 ಲಕ್ಷಕ್ಕಿಂತಲೂ ಅಧಿಕ ಮೌಲ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಲದ ಪತ್ತೆಗಾಗಿ ಎನ್‌ಸಿಬಿ ತಿಂಗಳು ಗಳಿಂದ ತೀವ್ರ ನಿಗಾ ಇರಿಸಿತ್ತು. ಜೂನ್ 28ರಂದು ಕೊಚ್ಚಿಗೆ ಅಂಚೆ ಪಾರ್ಸಲ್ ಮೂಲಕ ಬಂದ 280 ಎಲ್‌ಎಸ್‌ಡಿ ಬ್ಲೋಟ್‌ಗಳನ್ನು ಪತ್ತೆಹಚ್ಚಲಾಗಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಈ ಅಂತಾರಾಷ್ಟ್ರೀಯ ಮಾದಕದ್ರವ್ಯ ವಿತರಣಾ ಜಾಲದ ಸೂತ್ರಧಾರ ಮೂವಾಟುಪುಳದ ಎಡಿಸನ್ ಆಗಿರುವುದಾಗಿ ಪತ್ತೆಹಚ್ಚಲಾ ಗಿದ್ದು ಅದರಂತೆ ಆತನನ್ನು ಸೆರೆ ಹಿಡಿಯಲಾಗಿದೆ.
ಡಾರ್ಕ್‌ವೆಬ್ ಮೂಲಕ ಈತ ವಿದೇಶಗಳಿಂದ ಮಾದಕದ್ರವ್ಯಗಳನ್ನು ಖರೀದಿಸಿ ಕೇರಳದಾದ್ಯಂತ ವಿತರಣೆ ಮಾಡುತ್ತಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈತ ಕೇರಳದಾದ್ಯಂತ ವಾಗಿ ಹಲವು ಏಜೆಂಟ್‌ಗಳನ್ನು ಹೊಂದಿರುವ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ.