ಡಾ| ಜನಾರ್ದನ ನಾಯ್ಕ್ರಿಗೆ ಪುನಃ ಫೆಲೋಶಿಪ್
ಕಾಸರಗೋಡು: ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಜನಾರ್ದನ ನಾಯ್ಕ್ರಿಗೆ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯದ ಫೆಲೋಶಿಪ್ ಪುರಸ್ಕಾರ ಲಭಿಸಿದೆ. ವೃದ್ಧಾಪ್ಯ ವೈದ್ಯಕೀಯ ಶಾಸ್ತ್ರದ ಏಕೈಕ ಶೈಕ್ಷಣಿಕ ಸೊಸೈಟಿ ಯಾಗಿರುವ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ| ಸಜೇಶ್ ಅಶೋಕನ್ ಈ ಫೆಲೋಶಿಪ್ ಪುರಸ್ಕಾರವನ್ನು ಎರ್ನಾಕುಳಂನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ ಮಾಡಿದರು.ಡಾ| ಜನಾರ್ದನ ನಾಯ್ಕ್ ಈ ಹಿಂದೆ ಕಾಲೇಜ್ ಆಫ್ ಜನರಲ್ ಪ್ರಾಕ್ಟೀನರ್ಸ್ ಮತ್ತು ಅಕಾಡೆಮಿ ಆಫ್ ಮೆಡಿಕಲ್ ಸ್ಪೆಷಾಲಿಟಿ ಯಿಂದಲೂ ಫೆಲೋಶಿ ಪ್ಗಳನ್ನು ಪಡೆದಿದ್ದಾರೆ. ಕಾಸರಗೋ ಡಿನ ಜನರಲ್ ಆಸ್ಪತ್ರೆಯಲ್ಲಿ ಫಿಸೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿರುವ ಡಾ| ಜನಾರ್ದನ ನಾಯ್ಕ್ ಉತ್ತಮ ಸಂಚಾಲಕರಾಗಿ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರ ದಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.