ತಾಯಿಯನ್ನು ಕಿಚ್ಚಿಟ್ಟು ಕೊಲೆಗೈದ ಆರೋಪಿಗೆ ರಿಮಾಂಡ್

ಮಂಜೇಶ್ವರ: ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿ ತಾಯಿ ಯನ್ನು ಕಿಚ್ಚಿಟ್ಟು ಕೊಲೆಗೈದ ಆರೋ ಪಿಯನ್ನು ಪೊಲೀಸರು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ವರ್ಕಾಡಿ ಬಳಿಯ ನಲ್ಲೆಂಗಿ ನಿವಾಸಿ  ಮೆಲ್ವಿನ್ ಮೊಂತೇರೊ (33) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಮೆಲ್ವಿನ್ ಮೊಂತೇರೊ ತನ್ನ ತಾಯಿ ಹಿಲ್ಡಾ ಮೊಂತೇರೊ (60)ರನ್ನು ಕಿಚ್ಚಿಟ್ಟು ಕೊಲೆಗೈದಿದ್ದನು.  ಈ ತಿಂಗಳ 26ರಂದು ಈ ಘಟನೆ ನಡೆದಿದೆ. ಅಂದು ಮುಂಜಾನೆ 1.30ರ ವೇಳೆ ನೆರೆಮನೆ ನಿವಾಸಿ ಸಂಬಂಧಿಕರಾದ ವಿಕ್ಟರ್‌ರ ಮನೆಗೆ ತೆರಳಿದ ಮೆಲ್ವಿನ್ ಮೊಂತೇರೊ ತಾಯಿಗೆ ಸೌಖ್ಯವಿಲ್ಲವೆಂದು ತಿಳಿಸಿ ವಿಕ್ಟರ್‌ರ ಪತ್ನಿ ಲೋಲಿಟರನ್ನು ಮನೆಗೆ ಕರೆದೊಯ್ದಿದ್ದನು. ಬಳಿಕ ಲೋಲಿಟರ ಮೇಲೆ ಹಲ್ಲೆಗೈದು ಅವರ ಮೇಲೂ ಕಿಚ್ಚಿಡಲು ಯತ್ನಿಸಿದ್ದನು. ಈ ವೇಳೆ ಲೋಲಿಟ ಬೊಬ್ಬೆ ಹಾಕಿದ್ದು, ಇದರಿಂದ ಸ್ಥಳೀಯರು ತಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಬಳಿಕ ಸ್ಥಳೀಯರು ಶೋಧ ನಡೆಸಿದಾಗ ಹಿಲ್ಡಾ ಮೊಂತೇರೊರ ಮೃತದೇಹ ಮನೆ ಬಳಿಯ ಪೊದೆಗಳೆಡೆ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋ ಪಿಯನ್ನು ಕರ್ನಾಟಕದ ಕುಂದಾಪುರ ಬಳಿಯಿಂದ  ಬಂಧಿಸಿದ್ದರು.

Leave a Reply

Your email address will not be published. Required fields are marked *

You cannot copy content of this page