ತೆಂಗಿನ ಮರವೇರುವ ಕಾರ್ಮಿಕ ನೇಣುಬಿಗಿದು ಸಾವು
ಕಾಸರಗೋಡು: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೌಕಿ ಪೆರಿಯಡ್ಕ ನಿವಾಸಿ ಚಂದ್ರಶೇಖರ (38) ಮೃತಪಟ್ಟ ವ್ಯಕ್ತಿ. ತೆಂಗಿನ ಮರವೇರುವ ಕಾರ್ಮಿಕನಾಗಿದ್ದ ಇವರು ನಿನ್ನೆ ಮಧ್ಯಾಹ್ನ ವೇಳೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಿವಂಗತರಾದ ಚೋಮ-ಕಮಲ ದಂಪತಿಯ ಪುತ್ರನಾದ ಮೃತರು ಪತ್ನಿ ವನಜ, ಮಕ್ಕಳಾದ ಚರಣ್ಯ, ಚರಣ್ರಾಜ್, ಚೇತನ್ ಕುಮಾರ್, ವಿಷ್ಣು, ಸಹೋದರಿ ವನಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.