ದಲಿತರ ಹಕ್ಕು ಸಂರಕ್ಷಣೆಗೆ ಸದಾ ಸಿದ್ಧ- ಎ.ಕೆ. ಶಂಕರ

ಬದಿಯಡ್ಕ: ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದ ಒಂದು ಕಾಲ ವಿತ್ತು. ಈಗ ಹೆಚ್ಚಿನವರು ವಿದ್ಯಾವಂ ತರಾಗಿದ್ದಾರೆ. ದೇವಾಲಯಗಳನ್ನು ನಿಯಂತ್ರಿಸುವ ದೇವಸ್ವಂ ಮಂಡಳಿಯಲ್ಲಿ ದಲಿತರಿಗೆ ಅವಕಾಶ ಲಭಿಸಿದೆ. ಇದು ಕ್ರಾಂತಿಕಾರಿ ಹೆಜ್ಜೆ. ಆದರೆ ಇಂದೂ ಕೂಡಾ ಕೆಲವೆಡೆ ಅಸ್ಪೃಶ್ಯತೆ ಕಂಡು ಬರುತ್ತಿದೆ ಎಂದು ಮಲಬಾರ್ ದೇವಸ್ವಂ ಮಂಡಳಿ ನೂತನ ಸದಸ್ಯ ಎ.ಕೆ. ಶಂಕರ ಆದೂರು ನುಡಿದರು. ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧೂರು ದೇವಸ್ಥಾನದ ಉಗಮಕ್ಕೆ ಕಾರಣೀ ಭೂತಳಾದ ಮದರು ಮಹಾಮಾತೆಯ ಪವಿತ್ರ ಸ್ಥಾನಕ್ಕಾಗಿ ಮತ್ತು ಮದನಂತೇಶ್ವರ ದೇವರ ಮೂಲಸ್ಥಾನದ ಅಭಿವೃದ್ಧಿಗಾಗಿ ಮೊಗೇರ ಸಮಾಜ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಸರಕಾರಕ್ಕೆ ಮತ್ತು ಸಂಬಂಧಪಟ್ಟವರಿಗೆ ಮನವಿ ನೀಡಿದೆ ಎಂದು ಅವರು ನುಡಿದರು.ಬದಿಯಡ್ಕ ಪಂ. ಅಧ್ಯಕ್ಷೆ ಬಿ. ಶಾಂತ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ವಸಂತ ಅಜೆಕ್ಕೋಡು ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಆನಂದ ಕೆ. ಮವ್ವಾರು ಪ್ರಸ್ತಾಪಿಸಿದರು. ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಬಿ. ಕೃಷ್ಣದಾಸ್, ಅಂಗಾರ ಅಜೆಕ್ಕೋಡು, ಗಂಗಾಧರ ಗೋಳಿಯಡ್ಕ, ಹರಿಶ್ಚಂದ್ರ ಪುತ್ತಿಗೆ, ಎ.ಪಿ. ಬೇಡು ಕಲ್ಲಕಟ್ಟ, ಚಂದ್ರಶೇಖರ ಕುಂಬಳೆ, ರಾಮ ಪಟ್ಟಾಜೆ, ನಿಟ್ಟೋನಿ ಬಂದ್ಯೋಡು, ವಿಜಯಕುಮಾರ್ ಮೊಗ್ರಾಲ್ ಪುತ್ತೂರು, ಪೊನ್ನಪ್ಪ ಅಮ್ಮಂಗೋಡು ಮಾತನಾಡಿದರು. ಇದೇ ವೇಳೆ ಬದಿಯಡ್ಕ ಎಸ್‌ಸಿ ಕೋ-ಆಪರೇಟಿವ್ ಸೊಸೈಟಿಯಿಂದ ನಿವೃತ್ತರಾದ ಕಾರ್ಯದರ್ಶಿ ಡಿ. ಗೋಪಾಲರನ್ನು ಅಭಿನಂದಿಸಲಾಯಿತು. ಶಂಕರ ಡಿ. ದರ್ಭೆತ್ತಡ್ಕ ಸ್ವಾಗತಿಸಿ, ಸುಧಾಕರ ಬೆಳ್ಳಿಗೆ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page