ದಾಖಲೆ ಸೃಷ್ಟಿಸಿದ ವಿದ್ಯುತ್ ಬಳಕೆ ಉನ್ನತ ಮಟ್ಟದ ಸಭೆ ಕರೆದ ಸಿ.ಎಂ
ಕಾಸರಗೋಡು: ರಾಜ್ಯದಲ್ಲಿ ಬಿಸಿಲ ಬೇಗೆ ದಿನೇ ದಿನೇ ಹೆಚ್ಚಾಗು ತ್ತಿದ್ದು, ಅದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಬಳಕೆಯೂ ದಾಖಲೆ ಸೃಷ್ಟಿಸಿದೆ.
ಲೋಡ್ ಶೆಡ್ಡಿಂಗ್ ಹೊರತು ಪಡಿಸಲು ರಾಜ್ಯ ಸರಕಾರ ಪ್ರತಿದಿನ 20 ಕೋಟಿ ರೂ. ತನಕ ಹೆಚ್ಚುವರಿ ಹಣ ತೆತ್ತು ಪವರ್ ಎಕ್ಸ್ಚೇಂಜ್ ನಿಂದ ಹೆಚ್ಚುವರಿ ವಿದ್ಯುತ್ ಖರೀದಿಸಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾರಂಭಿಸಿದೆ. ರಾಜ್ಯದಲ್ಲಿ ದೈನಂದಿನ ವಿದ್ಯುತ್ ಬಳಕೆ ಈಗ 5,031 ಮೆಘಾವಾಟ್ಗೇರಿದ್ದು ಆ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ಸಾಧಾರಣವಾಗಿ ರಾಜ್ಯದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕದ ಅವಧಿಯಲ್ಲಿ ಅತೀ ಹೆಚ್ಚು ವಿದ್ಯುತ್ ಬಳಸಲಾಗುತ್ತಿದ್ದು, ಆದರೆ ಅದು ಈಗ ರಾತ್ರಿ 12ರ ತನಕ ಮುಂದುವರಿಯುತ್ತಿದೆಯೆಂದು ವಿದ್ಯುನ್ಮಂಡಳಿ ಹೇಳಿದೆ.
ಲೋಕಸಭಾ ಚುನಾವಣೆ ಇನ್ನೇನು ನಡೆಯಲಿದ್ದು, ಅದರಿಂದಾಗಿ ರಾಜ್ಯದಲ್ಲಿ ಸದ್ಯ ವಿದ್ಯುತ್ ಲೋಡ್ ಶೆಡ್ಡಿಂಗ್ ಆಗಲೀ, ಪವರ್ಕಟ್ ಆಗಲೀ ಹೇರಲು ಸಾಧ್ಯವಾಗದ ಸಂಕಷ್ಟದ ಸ್ಥಿತಿಯೂ ಇನ್ನೊಂದೆಡೆ ಉಂಟಾಗಿದೆ. ವಿದ್ಯುತ್ ನಿಯಂತ್ರಣ ಹೇರಿದಲ್ಲಿ ಅದು ಚುನಾವಣೆಯಲ್ಲಿ ಸರಕಾರಕ್ಕೆ ಪ್ರತಿಕೂಲವಾಗಿ ಪರಿಣಮಿಸಬಹುದು. ಇದರಿಂದಾಗಿ ಇಂತಹ ಬಿಕ್ಕಟ್ಟಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂ ಬುವುದರ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಮುಖ್ಯಮಂ ತ್ರಿ ಪಿಣರಾಯಿ ವಿಜಯನ್ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಾರ್ಚ್ ತಿಂಗಳ ತಾಪಮಾನ ಮಟ್ಟದಲ್ಲಿ ನಾಲ್ಕು ಡಿಗ್ರಿಯಷ್ಟು ಹೆಚ್ಚಾಗಿದೆ. ಮುಂದಿನ ತಿಂಗಳಲ್ಲಿ ಇದು ಇನ್ನಷ್ಟು ಏರುವ ಸಾಧ್ಯತೆ ಇದೆ. ಈ ಮಧ್ಯೆ ಉತ್ತಮ ಬೇಸಿಗೆ ಮಳೆ ಲಭಿಸಿದಲ್ಲಿ ಸಮಸ್ಯೆಗೆ ಅಲ್ಪವಾದರೂ ಶಮನ ಉಂಟಾಗಲಿದೆ. ಇಲ್ಲವಾದಲ್ಲಿ ಮಳೆಗಾಲ ಆರಂಭಗೊಳ್ಳುವ ತನಕ ಕಾಯಬೇಕಾಗಿ ಬರಲಿದೆ.