ದಾರಂದ ಮೈಮೇಲೆ ಬಿದ್ದು ಬಾಲಕಿ ಮೃತ್ಯು

ಮಂಗಳೂರು: ಗೋಡೆಗೆ ಒರಗಿಸಿ ಇಟ್ಟಿದ್ದ ದಾರಂದ ದೇಹಕ್ಕೆ ಬಿದ್ದು ಆರು ವರ್ಷ ಪ್ರಾಯದ ಬಾಲಕಿ ದಾರುಣವಾಗಿ ಮೃತಪಟ್ಟಿದ್ದಾಳೆ. ಬೆಳ್ತಂಗಡಿ ಪುತ್ತಿಲ ಕುಂಡಡ್ಕ ನಿವಾಸಿ ಹಾರಿಸ್ ಮುಸ್ಲಿಯಾರ್- ಅಸ್ಮ ದಂಪತಿ ಪುತ್ರಿ ಅಲ್ಫಿಯ (6) ಮೃತಪಟ್ಟ ಬಾಲಕಿ. ಈಕೆ ೧ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಹೊಸದಾಗಿ ನಿರ್ಮಿಸುತ್ತಿರುವ ಮನೆಗಾಗಿ ತೆಗೆದಿರಿಸಿದ್ದ ದಾರಂದವನ್ನು ನಿರ್ಮಾಣದಲ್ಲಿರುವ ಮನೆಯ ಗೋಡೆಗೆ ಒರಗಿಸಿಡಲಾಗಿತ್ತು. ಈ ಸ್ಥಳದಲ್ಲಿ ಆಟವಾಡುತ್ತಿದ್ದ ಅಲ್ಫಿಯಾಳ ಮೈಗೆ ದಾರಂದ ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಈಕೆಯನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. 

Leave a Reply

Your email address will not be published. Required fields are marked *

You cannot copy content of this page