ನಾಗಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಾಳೆಯಿಂದ
ಕುಂಬಳೆ: ಆರಿಕ್ಕಾಡಿ ಶ್ರೀ ಮಲ್ಲಿ ಕಾರ್ಜುನ ಕುಟುಂಬ ನಾಗಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಾಳೆ, ೩ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ನಾಳೆ ಅಪರಾಹ್ನ ೨.೩೦ರಿಂದ ವಿವಿಧ ಸಂಘಸಂಸ್ಥೆಗಳಿಂದ ಭಜನೆ, ೫ರಿಂದ ತಂತ್ರಿವರೇಣ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸ್ಥಳಶುದ್ಧಿ, ವಾಸ್ತು ಹೋಮ ಮೊದಲಾದ ವೈದಿಕ ಕಾರ್ಯಕ್ರಮ, ಜ. ೩ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ೮.೩೭ರಿಂದ ನಾಗಬಿಂಬ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ೧೦ರಿಂದ ವಿವಿಧ ಸಂಘ ಂಸಸ್ಥೆಗಳಿಂದ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ರಿಂದ ಅನ್ನ ಸಂತರ್ಪಣೆ ನಡೆಯಲಿದೆ.