ನಾಪತ್ತೆಯಾಗಿದ್ದ ಕೃಷಿಕ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಉಪ್ಪಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೃಷಿಕ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ವರ್ಕಾಡಿ ನಾವಡ್ರ ಬೈಲ್ ನಿವಾಸಿ ಕ್ಸೇವಿಯರ್ ಡಿ’ಸೋಜಾ (71) ಮೃತಪಟ್ಟ ವ್ಯಕ್ತಿ. ಇವರ ಮೃತದೇಹ ನಿನ್ನೆ ಮಧ್ಯಾಹ್ನ ಮನೆಯಿಂದ ೨೦೦ ಮೀಟರ್ ದೂರ ದಲ್ಲಿರುವ ಸಂಬಂಧಿಕರೊಬ್ಬರ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಮಂಗಳವಾರ ರಾತ್ರಿ ಆಹಾರ ಸೇವಿಸಿದ ಬಳಿಕ ಇವರು ಹೊರಗೆ ತೆರಳಿದ್ದರು. ದೀರ್ಘ ಹೊತ್ತಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಪರಿಸರ ಪ್ರದೇಶಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಪುತ್ರ ಚೇತನ್ ನೆವಿಲ್ ಡಿ’ಸೋಜಾ ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ನಾಗರಿಕರು ಹುಡುಕಾಟ ನಡೆಸುತ್ತಿ ದ್ದಂತೆ ಕ್ಸೇವಿಯರ್ ಡಿ’ಸೋಜಾರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾ ಯಿತು.
ಮೃತರು ಪತ್ನಿ ಮೆಟಿಲ್ಡಾ ಡಿ’ಸೋಜಾ, ಮಕ್ಕಳಾದ ಜೋಯಲ್ ನೆವಿಲ್ ಡಿ’ಸೋಜಾ,ಚೇತನ್ ನೆವಿಲ್ ಡಿ’ಸೋಜಾ, ಸಹೋದರರಾದ ಸೈಮನ್ ಡಿ’ಸೋಜಾ, ಸಲ್ವಿದರ್ ಡಿ’ಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.