ನಾಪತ್ತೆಯಾದ ವ್ಯಕ್ತಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಸಾವ ನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನೀಲೇಶ್ವರ ಕಾರ್ಯಾಂಗೋಡು ನಿವಾಸಿ ಎ.ಕೆ. ಬಾಲನ್ (೬೮) ಸಾವನ್ನಪ್ಪಿದ ವ್ಯಕ್ತಿ. ಇವರು ನ್ಯೂ ಮಾಹಿ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೈಲುಗಾಡಿ ಢಿಕ್ಕಿ ಹೊಡೆದು ಇವರು ಸಾವನ್ನಪ್ಪಿರ ಬಹುದೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಮೃತರು ಸಹೋದರ-ಸಹೋದರಿಯರಾದ ಚಂದನ್, ಕುಮಾರನ್, ಚಂದ್ರನ್, ಕಲ್ಯಾಣಿ, ಚಂದ್ರಮತಿ, ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು-ಮಿತ್ರನ್ನು ಅಗಲಿದ್ದಾರೆ.