ನಿದ್ರಿಸುತ್ತಿದ್ದ ತಾಯಿಗೆ ಇರಿದ ಪ್ರಕರಣ: ಪುತ್ರನ ಬಂಧನ

ಉಪ್ಪಳ: ನಿದ್ರಿಸುತ್ತಿದ್ದ ತಾಯಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಆರೋಪಿಯಾದ ಪುತ್ರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಉಪ್ಪಳ ಮಣಿಮುಂಡ ಶೇಕ್ ಆದಂ ಕೋಟೇಜ್‌ನ ಮೊಹ್‌ಸಿನ್ ಅಶ್ರಫ್ ಖಾನ್ (32) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ತಾಯಿ ಶಮೀಮಾ ಬಾನು ಅವರಿಗೆ ನಿನ್ನೆ ಮುಂಜಾನೆ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.

ಇರಿತದಿಂದ ಗಂಭೀರ ಗಾಯಗೊಂಡಿರುವ ಶಮೀಮಾ ಬಾನು ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

RELATED NEWS

You cannot copy contents of this page