ನಿಫಾಕ್ಕೆ ಯುವಕ ಬಲಿಯಾದ ಬೆನ್ನಲ್ಲೇ ರಾಜ್ಯದಲ್ಲಿ ಮಂಗನಕಾಯಿಲೆ ಭೀತಿ

ತಿರುವನಂತರಪುರ: ನಿಫಾ ಜ್ವರಕ್ಕೆ ಮಲಪ್ಪುರಂ ತಿರುವೇಲಿ ನಡುವತ್ ನಿವಾಸಿಯಾಗಿರುವ  ೨೪ರ ಹರೆಯದ ಯುವಕ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಎಂ ಫಾಕ್ಸ್ (ಮಂಗನಕಾಯಿಲೆ) ಭೀತಿಯೂ ಆವರಿಸಿದೆ.

ಬೆಂಗಳೂರಿನಿಂದ ಊರಿಗೆ ಹಿಂ ತಿರುಗಿದ ಮಲಪ್ಪುರಂ ನಡುವತ್ತ್ ನಿವಾಸಿಯಾಗಿರುವ ಯುವಕನ ಸಾವಿಗೆ ನಿಫಾ ಸೋಂಕು ಕಾರಣವಾಗಿದೆ ಯೆಂಬುವುದು ಖಚಿತಗೊಂಡಿದೆ ಯೆಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಈ ಯುವಕನೊಂದಿಗೆ ಸಂಪರ್ಕ ಹೊಂದಿರುವ ೧೭೫ ಮಂದಿಯ ಪಟ್ಟಿ ತಯಾರಿಸಲಾಗಿದೆ. ಇವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಇವರಲ್ಲಿ ೨೬ ಮಂದಿಯನ್ನು ಹೈರಿಸ್ಕ್ ಪಟ್ಟಿಯಲ್ಲಿ ಒಳಪಡಿಸಲಾಗಿದೆ. ಇವರೆಲ್ಲರ ಗಂಟಲ ರಸ ಇತ್ಯಾದಿ ಮಾದರಿಗಳನ್ನು ರಾಸಾ ಯನಿಕ ಪರೀಕ್ಷೆಗೆ ಕಳುಹಿಸಿಕೊಡ ಲಾಗಿದೆ. ಇದರಲ್ಲಿ ೧೩ ಮಂದಿಯ ಫಲಿತಾಂಶ ಲಭಿಸಿದ್ದು, ಅದು ನೆಗೆಟಿವ್ ಆಗಿದ್ದು ಇದು ನೆಮ್ಮದಿಯ ವಿಷಯ ವಾಗಿ ದೆಯೆಂದು ಸಚಿವರು ತಿಳಿಸಿದ್ದಾರೆ.

ನಿಫಾ ಭೀತಿ ಆವರಿಸಿದ ಬೆನ್ನಲ್ಲೇ  ರಾಜ್ಯದಲ್ಲಿ ಮಂಗನಕಾಯಿಲೆ ಭೀತಿಯೂ ಆವರಿಸಿದ್ದು, ದುಬಾಯಿಯಿಂದ ಒಂದು ವಾರದ ಹಿಂದೆ ಊರಿಗೆ ಹಿಂತಿರುಗಿದ ಮಂಜೇರಿ ಎಡವಣ್ಣ ನಿವಾಸಿಯಾಗಿರುವ ಯುವಕನಲ್ಲಿ ಮಂಗನಕಾಯಿಲೆ ರೋಗ ಲಕ್ಷಣ ಕಂಡುಬಂದಿದೆ. ಇದರಿಂದಾಗಿ ಆತನ  ಗಂಟಲ ರಸದ ಮಾದರಿಯನ್ನು ಸಂಗ್ರಹಿಸಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ವೈರಾಲಜಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.  ರೋಗ ಲಕ್ಷಣದಿಂದ ಈ ಯುವಕನನ್ನು ನಿನ್ನೆ ಮಂಜೇರಿಯ ಆಸ್ಪತ್ರೆಯೊಂದಕ್ಕೆ ತರಲಾಗಿತ್ತು. ವೈದ್ಯ ತಪಾಸಣೆಯಲ್ಲಿ ಆತನಿಗೆ ಮಂಗನಕಾಯಿಲೆ ಲಕ್ಷಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯ ಐಸೊಲೇಶನ್ ನಿಗಾ ಘಟಕದಲ್ಲಿ ಇರಿಸಲಾಗಿದೆ.   ರಾಜ್ಯದಲ್ಲಿ  ನಿಫಾದ ಹೊರತಾಗಿ ಮಂಗನಕಾಯಿಲೆ ಭೀತಿಯೂ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವೆ ವೀಣಾ ಜೋರ್ಜ್ ಇಂದು ದಿಲ್ಲಿಗೆ ಸಾಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಕೇರಳಕ್ಕೆ ಅಗತ್ಯದ ನೆರವು ಯಾಚಿಸಲಿದ್ದಾರೆ. ಅದಕ್ಕಾಗಿ ಅವರು ದೆಹಲಿಗೆ ಪ್ರಯಾಣ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page