ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಬಡಿದು ಯುವಕ ಮೃತ್ಯು
ಕಾಸರಗೋಡು: ನಾಡು ನಗರ ಹೊಸ ವರ್ಷ ಆಚರಣೆಯ ಸಂಭ್ರಮ ದಲ್ಲಿರುವಾಗಲೇ ಕಾರು ಅಪಘಾತ ದಲ್ಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಉದಯಪುರಂ ಗ್ರಾಮಲಕ್ಷ್ಮಿ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತ ದಲ್ಲಿ ಉದಯಪುರಂ ಪಣಂಕೋಟ್ ನಿವಾಸಿ ಯೂಸಫ್ರ ಪುತ್ರ ಶಫೀಕ್ (33) ಎಂಬವರು ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ೧೧.೩೦ರ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಂಭೀರಗಾಯಗೊಂಡ ಶಫೀಕ್ರನ್ನು ಕೂಡಲೇ ಪೂಡಂಕಲ್ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಪಘಾತ ಬಗ್ಗೆ ರಾಜಪುರಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.