ನೂರಕ್ಕೂ ಹೆಚ್ಚು ಮೊಬೈಲ್ ಫೋನ್, 40,000 ಸಿಮ್ ಸಹಿತ ದಿಲ್ಲಿ ನಿವಾಸಿ ಸೆರೆ
ಕಾಸರಗೋಡು: ಆನ್ಲೈನ್ ವಂಚನೆಗಾರರಿಗೆ ಅಗತ್ಯದ ಸಿಮ್ ಕಾರ್ಡ್ ತಲುಪಿಸುತ್ತಿರುವ ಓರ್ವನನ್ನು ಕರ್ನಾಟಕದ ಮಡಿಕೇರಿಯಿಂದ ಮಲಪ್ಪುರಂ ಸೈಬರ್ ಪೊಲೀಸ್ ತಂಡ ಬಂಧಿಸಿದೆ.
ಮೂಲತಃ ದಿಲ್ಲಿ ನಿವಾಸಿ ಅಬ್ದುಲ್ ರೋಷನ್ (40) ಬಂಧಿತನಾದ ಆರೋಪಿ. ವಿವಿಧ ಸಂಸ್ಥೆಗಳಿಗೆ ಸೇರಿದ 40,000 ರೂ. ದಷ್ಟು ಮೊಬೈಲ್ ಸಿಮ್ ಕಾರ್ಡ್ಗಳು, ನೂರರಷ್ಟು ಮೊಬೈಲ್ ಫೋನ್ಗಳು ಮತ್ತು ಆರು ಬಯೋಮೆಟ್ರಿಕ್ ಸ್ಕ್ಯಾನರ್ಗಳನ್ನು ಈತನಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ನಕಲಿ ಶೇರುಮಾರುಕಟ್ಟೆಯೊಂದರ ನಕಲಿ ವೆಬ್ಸೈಟ್ ಮೂಲಕ ತನ್ನಿಂದ ಆನ್ಲೈನ್ ಮೂಲಕ 1.08 ಕೋಟಿ ರೂ. ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಮಲಪ್ಪುರಂ ವೆಂಞರ ನಿವಾಸಿಯೋರ್ವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಸೈಬರ್ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಬ್ದುಲ್ ರೋಷನ್ನನ್ನು ಬಂಧಿಸಲಾಗಿದೆ. ಈತ ಮೊಬೈಲ್ ಕಂಪೆನಿಯೊಂದರ ಸಿಮ್ ಕಾರ್ಡ್ ವಿತರಣೆಗಾರನೂ ಆಗಿದಾನೆ. ರಿಟೇಲ್ ಸಿಮ್ ವಿತರಣಾ ಸಂಸ್ಥೆಗಳಿಗೂ ಈತ ಸಿಮ್ ಕಾರ್ಡ್ಗಳನ್ನು ವಿತರಿಸುತ್ತಿ ದ್ದಾನೆ. ಅಂತಹ ರಿಟೇಲ್ ಸಿಮ್ ಮಾರಾಟ ಕೇಂದ್ರಗಳಿಗೆ ಸಿಮ್ ಕಾರ್ಡ್ ಗಳನ್ನು ಪಡೆಯಲು ಬರುವವರ ಫಿಂ ಗರ್ಬಯೋಮೆಟ್ರಿಕ್ ಸ್ಕ್ಯಾನರ್ಗಳನ್ನು ಯಾರಿಗೂ ತಿಳಿಯದ ಹಾಗೆ ಪಡೆದು ಅದನ್ನು ಬಳಿಕ ಅದರ ವಿಳಾಸದಾರರಿಗೂ ಅರಿಯದೆ ಅವರ ಹೆಸರಿನಲ್ಲಿ ಬೇರೆ ಬೇರೆ ಸಿಮ್ಗಳನ್ನು ತಯಾರಿಸುವುದು ಈತನ ದಂಧೆಯಾಗಿದೆ. ಹೀಗೆ ತಯಾರಿಸಲಾಗುವ ಸಿಮ್ಗಳನ್ನು ಆತ ಬಳಿಕ ನಕಲಿ ಆನ್ಲೈನ್ ವಂಚನಾ ಜಾಲದವರಿಗೆ ಹಸ್ತಾಂತರಿಸಿ ಬಾರೀ ಹಣ ಸಂಪಾದಿಸುತ್ತಿರುವುದಾಗಿಯೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.