ನ್ಯಾಯಾಧೀಶರ ಮನೆಯಿಂದ 6 ಪವನ್ ಚಿನ್ನಾಭರಣ ಕಳವು

ಕೊಚ್ಚಿ: ಹೈಕೋರ್ಟ್‌ನ ನ್ಯಾಯಾಧೀಶ ಎ. ಬದರುದ್ದೀನ್‌ರ ಮನೆಯಲ್ಲಿ ಕಳವು ನಡೆಸಲಾಗಿದೆ. ಮಲಗುವ ಕೊಠಡಿಯಲ್ಲಿ ಕಪಾಟ್‌ನಲ್ಲಿರಿಸಿದ್ದ 6 ಪವನ್ ಚಿನ್ನಾಭರಣಗಳನ್ನು ಕಳವುಗೈಯ್ಯಲಾಗಿದೆ. ಇಂದು ಮುಂಜಾನೆ ಘಟನೆ ತಿಳಿದು ಬಂದಿದೆ.

ಕೊಚ್ಚಿ ಪತ್ತಡಿಪಾಲ ಮನೆಯಲ್ಲಿ ಕಳವು ನಡೆದಿದೆ. ಈ ಮನೆಗೆ ಪೊಲೀಸ್ ಕಾವಲಿದೆ. ಮನೆ ಬಗ್ಗೆ ಪರಿಚಯವಿರುವ ಯಾರಾದರೂ ಆಗಿರಬಹುದು ಕಳವಿನ ಹಿಂದೆ ಎಂದು ಶಂಕಿಸಲಾಗಿದೆ. ಕಳಮಶ್ಶೇರಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page