ಪಂಜತ್ತೊಟ್ಟಿ: ಭಜನಾ ಮಂದಿರದಲ್ಲಿ ನೂತನ ಛಾಯಾಫಲಕ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಾಳೆಯಿಂದ
ಮಂಗಲ್ಪಾಡಿ: ಪಂಜತ್ತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ ನೂತನ ಛಾಯಾಫಲಕ ಮತ್ತು ಸಾನಿಧ್ಯ ಬ್ರಹ್ಮಕಲಶೋತ್ಸವ ನಾಳೆ, ೨೫ರಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.
ನಾಳೆ ಸಂಜೆ ಅಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹೊರೆಕಾಣಿಕೆ, ೬ಕ್ಕೆ ವಿವಿಧ ತಂಡಗಳಿಂದ ಕುಣಿತ ಭಜನೆ, ರಾತ್ರಿ ೮ಗಂಟೆಗೆ ವೈದಿಕ ಕಾರ್ಯ ಕ್ರಮಗಳು, 25ರಂದು ಬೆಳಿಗ್ಗೆ ೬ಕ್ಕೆ ಗಣಪತಿಹೋಮ, ಕಲಶಪೂಜೆ, ಶಿಖರ ಪ್ರತಿಷ್ಠೆ, 10-12ರ ಮುಹೂತದಲ್ಲಿ ಛಾಯಾಫಲಕ ಪ್ರತಿಷ್ಠೆ, ಬಳಿಕ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಈ ವೇಳೆ ವಿವಿಧ ಭಜನಾ ತಂಡಗಳಿಂದ ಭಜನೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಡಾ| ಗಿರಿಧರ ರಾವ್ ಎಂ.ಎಸ್ ಮಾಣಿಹಿತ್ಲು ಅಧ್ಯಕ್ಷತೆ ವಹಿಸುವರು. ಹಲವರು ಉಪಸ್ಥಿತರಿರುವರು. ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ, 8.30ರಿಂದ ಊರ ಪ್ರತಿಭೆಗಳಿಂದ ನೃತ್ಯ ವೈಭವ, ಭಕ್ತಿಗಾನಸುಧಾ, ವಯಲಿನ್ ವಾದನ ನಡೆಯಲಿದೆ.