ಪಂಪಾದಲ್ಲಿ ಇರುಮುಡಿ ಕಟ್ಟಲು ಸೌಕರ್ಯ


ಶಬರಿಮಲೆ: ಇರುಮುಡಿ ಕಟ್ಟು ಇಲ್ಲದೆ ತಲುಪುವ ಅಯ್ಯಪ್ಪ ಭಕ್ತರಿಗೆ 24 ಗಂಟೆಯೂ ಪಂಪಾದಲ್ಲಿ ಕಟ್ಟ ಕಟ್ಟಲು ಸೌಕರ್ಯ ಏರ್ಪಡಿಸಲಾ ಗಿದೆ. ಪಂಪಾ ಗಣಪತಿ ಕ್ಷೇತ್ರದ ಹಿಂ ಭಾಗದಲ್ಲಿ ಈ ಸೌಕರ್ಯವಿದೆ. ಇರುಮುಡಿಕಟ್ಟು ತುಂಬಿಸಲು 300 ರೂ. ನೀಡಬೇ ಕಾಗಿದೆ. ಇಲ್ಲಿ ಪ್ಲಾಸ್ಟಿಕ್ ಸಂಪೂರ್ಣ ಹೊರತುಪಡಿಸಲಾಗಿದೆ. ಭಕ್ತರಿಗೆ ಸ್ವಯಂ ಆಗಿ ತೆಂಗಿನ ಕಾಯಿ ಯಲ್ಲಿ ತುಪ್ಪ ತುಂಬಿಸಲು ಇಲ್ಲಿ ಅವಕಾಶವಿದೆ.
ಶಬರಿಮಲೆಯಲ್ಲಿ ಮುಂಜಾನೆ 3 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು. ಬಳಿಕ 3.05ಕ್ಕೆ ಅಭಿಷೇಕ, ಗಣಪತಿ ಹೋಮ, 3.45ರಿಂದ 7 ಗಂಟೆವರೆಗೆ ಹಾಗೂ 8ರಿಂದ 11ರ ವರೆಗೆ ತುಪ್ಪಾಭಿಷೇಕ, 7.30ಕ್ಕೆ ಬೆಳಗ್ಗಿನ ಪೂಜೆ, 11.30ಕ್ಕೆ ಕಲಶಾಭಿಷೇಕ, ಬಳಿಕ ಕಳಭಾಭಿಷೇಕ, ಮಧ್ಯಾಹ್ನ 12.30ಕ್ಕೆ ಪೂಜೆ, 1 ಗಂಟೆಗೆ ನಡೆ ಬಾಗಿಲು ಮುಚ್ಚಲಾಗುವುದು. ಸಂಜೆ 3 ಗಂಟೆಗೆ ತೆರೆದು 6.30ಕ್ಕೆ ದೀಪಾ ರಾಧನೆ, ರಾತ್ರಿ 7ರಿಂದ ತುಪ್ಪಾಭಿಷೇಕ, 9.30ಕ್ಕೆ ಅತ್ತಾಳ ಪೂಜೆ, 10.50ಕ್ಕೆ ಹರಿವರಾಸನಂ, 11 ಗಂಟೆಗೆ ಗರ್ಭ ಗುಡಿಯ ಬಾಗಿಲು ಮುಚ್ಚಲಾಗುವುದು.

Leave a Reply

Your email address will not be published. Required fields are marked *

You cannot copy content of this page