ಪತಿ ಮನೆಯಲ್ಲಿ ಯುವತಿ ನೇಣು
ಕಲ್ಲಿಕೋಟೆ: ಹಾಲುಶ್ಶೇರಿ ಪೂನೂರು ಎಂಬಲ್ಲಿ ಪತಿ ಗೃಹದಲ್ಲಿ ಯುವತಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿನ ಕರಿಂಗಾಳಿಮ್ಮಲ್ನಲ್ಲಿ ವಾಸಿಸುವ ಶ್ರೀಜಿತ್ರ ಪತ್ನಿ ಜಿಸ್ನಾ (24) ಮೃತಪಟ್ಟವರು. ಕಣ್ಣೂರು ಕೇಳಗಂ ನಿವಾಸಿಯಾಗಿದ್ದಾರೆ. ನಿನ್ನೆ ಸಂಜೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮನೆಮಂದಿ ಕಂಡಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಎರಡು ವರ್ಷದ ಮಗು ಮಾತ್ರವಿತ್ತೆನ್ನಲಾಗಿದೆ. ಪತಿಯ ತಂದೆ ಕೆಲಸ ಮುಗಿಸಿ ಹಿಂತಿರುಗಿದಾಗ ಜಿಸ್ನಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಮೂರು ವರ್ಷದ ಹಿಂದೆ ಇವರ ವಿವಾಹ ಜರಗಿತ್ತು. ಪತಿ ಆಟೋ ಚಾಲಕನಾಗಿದ್ದಾರೆ. ಬಾಲುಶ್ಶೇರಿ ಸಿಐ ಟಿ.ಪಿ. ದಿನೇಶ್ರ ನೇತೃತ್ವದಲ್ಲಿ ಪೊಲೀಸರು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಲ್ಲಿಕೋಟೆ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ.