ಪತ್ನಿಯನ್ನು ಕೊಲೆಗೈದು ತುಂಡುಗಳಾಗಿ ಮಾಡಿ ಬ್ಯಾಗ್ನಲ್ಲಿ ತುಂಬಿಸಿ ಉಪೇಕ್ಷಿಸಲು ಯತ್ನ: ಬೀದಿ ನಾಯಿಗಳ ಬೊಗಳುವಿಕೆಯಿಂದ ಸೆರೆಯಾದ ಆರೋಪಿ
ತಿರುವನಂತಪುರ: ನಾಗರ ಕೋವಿಲ್ ಬಳಿಯ ಅಂಜು ಗ್ರಾಮದಲ್ಲಿ ಪತ್ನಿಯನ್ನು ಕೊಲೆಗೈದು ತುಂಡುಗಳಾಗಿ ಮಾಡಿ ಬ್ಯಾಗ್ನಲ್ಲಿ ಹಾಕಿ ಕಸಾಯಿಖಾನೆಯ ಕೆಲಸಗಾರ ಪತಿ ಉಪೇಕ್ಷಿಸಲು ಯತ್ನಿಸಿದ್ದಾನೆ. ಬೀದಿ ನಾಯಿಗಳು ಬೊಗಳಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ತಿರುನಲ್ವೇಲಿ ಪಾಳಯಂಕೋಟೆ ಸಮಾಧಾನಪುರಂ ನಿವಾಸಿ ಮರಿಯಾಸತ್ಯ (30)ಳನ್ನು ಕೊಲೆಗೈಯ್ಯಲಾಗಿದೆ. ಈಕೆಯ ಪತಿ ಮಾರಿಮುತ್ತು (35) ಸೆರೆಯಾದ ವ್ಯಕ್ತಿ. ಮಾಂಸ ತುಂಡು ಮಾಡುವ ಕತ್ತಿ ಉಪಯೋಗಿಸಿ ಕೊಲೆಗೈದ ಬಳಿಕ ಇಲೆಕ್ಟ್ರಿಕ್ ಕಟರ್ ಉಪಯೋಗಿಸಿ ಮತದೇಹವನ್ನು ತುಂಡುಗಳಾಗಿ ಮಾಡಿರಬೇಕೆಂದು ಶಂಕಿಸಲಾಗಿದೆ. ಕೊಲೆಗೈಯ್ಯುವುದು ಹೊರಗೆ ಕೇಳದಂತಿರಲು ಟಿವಿಯ ಶಬ್ದ ಹೆಚ್ಚಿಸಿ, ಕೊಂದ ಬಳಿಕ ಹತ್ತು ತುಂಡುಗಳಾಗಿ ಮಾಡಿ ಮೂರು ಬ್ಯಾಗ್ಗಳಲ್ಲಿ ತುಂಬಿಸಿ ನಿನ್ನೆ ಬೆಳಿಗ್ಗೆ ಮಾರಿಮುತ್ತು ಮನೆಯಿಂದ ಹೊರಗಿಳಿದಿದ್ದನು. ಎಲ್ಲೋ ದೂರದಲ್ಲಿ ಬ್ಯಾಗ್ಗಳನ್ನು ಉಪೇಕ್ಷಿಸಲು ಯೋಜನೆ ಹಾಕಿದ್ದನು. ಆದರೆ ಮಾಂಸದ ವಾಸನೆ ಹಿಡಿದ ಬೀದಿ ನಾಯಿಗಳು ಮಾರಿಮುತ್ತುವಿನ ಸುತ್ತು ಸೇರಿ ಬೊಗಳಿದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಶಂಕೆ ಉಂಟಾಯಿತು. ಪ್ರಶ್ನಿಸಿದಾಗ ಹಂದಿಯ ಮಾಂಸವೆಂದು ಈತ ಹೇಳಿದ್ದನು. ಆದರೆ ಅದರಲ್ಲಿ ವಿಶ್ವಾಸವಿಲ್ಲದೆ ಪರಿಶೀಲಿಸಿದಾಗ ಮೃತದೇಹದ ತುಂಡುಗಳು ಕಂಡು ಬಂದಿವೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಅವರು ತಲುಪಿ ಮಾರಿಮುತ್ತುವನ್ನು ಕಸ್ಟಡಿಗೆ ತೆಗೆದಿದ್ದಾರೆ. ಅನೈತಿಕ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಮಾರಿಮುತ್ತು ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯಗೈಯ್ಯುತ್ತಿ ದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಸಂಬಂಧಿಕರು ಮಧ್ಯೆಪ್ರವೇಶಿಸಿ ಇವರ ಮಧ್ಯೆಗಿನ ವಿವಾದವನ್ನು ಪರಿಹರಿಸಿದ್ದರು. ಒಂದೂವರೆ ತಿಂಗಳ ಹಿಂದೆ ಈ ದಂಪತಿ ಅಂಜು ಗ್ರಾಮದಲ್ಲಿ ವಾಸ ಆರಂಭಿಸಿದ್ದರು.
ಇವರ ಇಬ್ಬರು ಮಕ್ಕಳು ಪಾಳಯಂಕೋಟ್ನಲ್ಲಿರುವ ಹಾಸ್ಟೆಲ್ನಲ್ಲಿದ್ದುಕೊಂಡು ಕಲಿಯುತ್ತಿದ್ದಾರೆ. ಇದೇ ವೇಳೆ ಮಾರಿಮುತ್ತುವಿಗೆ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.