ಪಾನ್ ಮಸಾಲೆ ಮಾರಾಟ: ಓರ್ವ ಸೆರೆ
ಬದಿಯಡ್ಕ: ನೆಲ್ಲಿಕಟ್ಟೆಯ ಬಸ್ ನಿಲ್ದಾಣ ಸಮೀಪ ಪಾನ್ ಮಸಾಲೆ ಮಾರಾಟಗೈಯ್ಯುತ್ತಿದ್ದಾತನನ್ನು ಬದಿ ಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕುಂಬ್ಡಾಜೆ ಅನ್ನಡ್ಕ ನಿವಾಸಿ ಜುನೈದ್ (36) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ 80 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ನಿನ್ನೆ ಈತ ನೆಲ್ಲಿಕಟ್ಟೆಯಲ್ಲಿ ಪಾನ್ ಮಸಾಲೆ ಮಾರಾಟಗೈಯ್ಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.