ಪುತ್ರನ ವಿವಾಹ ಸಿದ್ಧತೆಯಲ್ಲಿದ್ದ ತಂದೆ ನಿಧನ
ಮೊಗ್ರಾಲ್: ಇಲ್ಲಿನ ಮೈಮೂನ ನಗರ ನಿವಾಸಿ ಮುಹಮ್ಮದ್ ಮೊಗ್ರಾಲ್ (56) ನಿಧನ ಹೊಂದಿದರು. ಪುತ್ರ ಫರೂಕ್‌ನ ವಿವಾಹ ಈ ತಿಂಗಳ 17ರಂದು ನಡೆಯಲಿದ್ದು, ಇದರ ಸಿದ್ಧತೆಯ ಲ್ಲಿರುವ ಮಧ್ಯೆ ಆಕಸ್ಮಿಕ ನಿಧನ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಮೃತರು ಪತ್ನಿ ಆಮಿನ, ಇತರ ಮಕ್ಕಳಾದ ತಾಜುದ್ದೀನ್ ಮೊಗ್ರಾಲ್, ಸಾಹಿರಾಬಾನು, ಆಯಿಷತ್ ರುಬೀನ, ಉಬೈದ, ಸೊಸೆ ಆಬಿದ, ಅಳಿಯಂದಿರಾದ ಲತೀಫ್, ಮುನೀರ್, ಸಿದ್ದಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.