ಪುತ್ರಿಯ ರಾತ್ರಿ ಸಂಚಾರ: ವಾಗ್ವಾದದಲ್ಲಿ ತಂದೆಯಿಂದ ಕೊಲೆ
ಆಲಪ್ಪುಳ: ಓಮನಪ್ಪುಳ ಕೊಲೆ ಕೃತ್ಯದಲ್ಲಿ ಭಯಗೊಳಿಸುವ ಮಾಹಿತಿ ಗಳು ಬಹಿರಂಗಗೊಂಡಿದೆ. ಮನೆಮಂ ದಿಯ ಮುಂದೆ ಆರೋಪಿ ಜೋಮೋನ್ ಪುತ್ರಿ ಜಾಸ್ಮಿನ್ರನ್ನು ಕುತ್ತಿಗೆ ಬಿಗಿದು ಕೊಲೆಗೈದಿರುವುದಾಗಿ ಮಾಹಿತಿ ಬಹಿರಂಗಗೊಂಡಿದೆ. ಜಾಸ್ಮಿನ್ ಅರೆಪ್ರಜ್ಞೆಯಲ್ಲಿ ಆದ ಬಳಿಕ ಈತ ಮನೆಮಂದಿಯಲ್ಲಿ ಅಲ್ಲಿಂದ ತೆರಳಲು ಆಗ್ರಹಿಸಿದ್ದು, ಬಳಿಕ ಕುತ್ತಿಗೆಗೆ ಬೈರಾಸು ಬಿಗಿದು ಸಾವು ಖಚಿತಪಡಿಸಿದ್ದನೆನ್ನ ಲಾಗಿದೆ. ಪುತ್ರಿ ಏಂಜಲ್ ಸಾಮಾನ್ಯವಾಗಿ ರಾತ್ರಿ ಪ್ರಯಾಣ ನಡೆಸುತ್ತಿರುವುದರ ಬಗ್ಗೆ ಸ್ಥಳೀಯರು ಜೋಸ್ಮೋನ್ಗೆ ತಿಳಿಸಿದ್ದರು.
ಮಂಗಳವಾರ ರಾತ್ರಿ ಸ್ಕೂಟರ್ನಲ್ಲಿ ಹೊರಹೋದ ಯುವತಿ ಮತ್ತೆ ರಾತ್ರಿ ಹತ್ತೂವರೆ ಗಂಟೆಗೆ ಹಿಂತಿರುಗಿದ್ದಾಳೆ. ಇದನ್ನು ತಂದೆ ಜೋಸ್ಮೋನ್ ಪ್ರಶ್ನಿಸಿ ದ್ದನು. ಈ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದದಿಂದ ಕೊಲೆ ಸಂಭವಿಸಿದೆ. ಗಂಟೆಗೆಲ ಕಾಲ ಪೊಲೀಸರು ಪ್ರಶ್ನಿಸಿದಾಗ ಜೋಮೋನ್ ಈ ವಿವರಗಳನ್ನು ಪೊಲೀಸರಲ್ಲಿ ತಿಳಿಸಿದ್ದಾನೆ.