ಪೊದೆ ಬೆಳೆದ ಸಿವಿಲ್ ಸ್ಟೇಶನ್: ಪರಿಸರ ಸ್ವಚ್ಛತೆಗೆ ಕ್ರಮವಿಲ್ಲ

ಕಾಸರಗೋಡು: ಊರನ್ನೇ ಸ್ವಚ್ಛವಾ ಗಿಡಬೇಕು ಎಂದು ಆದೇಶ ಹೊರಡಿಸುವ ಜಿಲ್ಲಾಡಳಿತದ ಕೇಂದ್ರ ಸ್ಥಳ ಕಾಡುಪೊದೆ ಗಳಿಂದ ಆವರಿಸಿ ತ್ಯಾಜ್ಯ ಸಂಗ್ರಹಗೊಂಡು ಕಲೆಕ್ಟರೇಟ್‌ಗೆ ಬರುವವರನ್ನು ಅಣಕಿಸು ತ್ತಿದೆ. ಸಿವಿಲ್ ಸ್ಟೇಶನ್‌ನ ಹಿಂಬದಿಯಲ್ಲಿ ಕಾಡುಪೊದೆ ಬೆಳೆದು ಬಳ್ಳಿ  ಹವಾನಿ ಯಂತ್ರಿತ ಫ್ಯಾನನ್ನೇ ಸುತ್ತಿಕೊಂಡಿದೆ. ಮರಗಳು ಬೆಳೆದು ದೊಡ್ಡದಾಗಿ ಸಣ್ಣ ಕಾಡಿನಂತೆ ಭಾಸವಾಗುತ್ತಿದ್ದು, ಇಲ್ಲಿ ವನ್ಯ ಮೃಗಗಳು ಕೂಡಾ ವಾಸ ಮಾಡುವಷ್ಟು  ಹಬ್ಬಿದೆ. ಕಲೆಕ್ಟರೇಟ್‌ನ ಹಿಂಬದಿಗಳಲ್ಲೂ ಹಲವಾರು ಕಚೇರಿಗಳು ಕಾರ್ಯಾಚರಿ ಸುತ್ತ್ತಿದ್ದು, ಇದರ ಬಳಿಯಲ್ಲಿ ಹೊರಗೆ ಮಳೆ  ಸುರಿಯುವ ವೇಳೆ ನೀರು ಸಂಗ್ರಹಗೊಳ್ಳುತ್ತಿದೆ. ಇದರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ವಿವಿಧ ಅಗತ್ಯಗ ಳಿಗೆ ಕಚೇರಿಗಳಿಗೆ ತಲುಪುವ ಮಂದಿಗೆ ಉಚಿತ ಇಂಜೆಕ್ಷನ್’ ಲಭಿಸುತ್ತದೆ.

ಆರ್‌ಟಿಒ ಕಟೇರಿ ಬಳಿ ಹಾಗೂ ಅದರ ಬಳಿಯ ಇತರ ಕಚೇರಿಗಳಿಗೆ ದಿನಂಪ್ರತಿ ನೂರಾರು ಮಂದಿ ತಲುಪುತ್ತಿದ್ದರೂ ಅಲ್ಲಿ ಗಂಟೆಗಳ ಕಾಲ ಕೆಲವೊಮ್ಮೆ ನಿಲ್ಲಬೇಕಾಗುತ್ತಿದೆ. ಆದರೆ ಕಾಲು ನೋವಾದರೂ ಒಮ್ಮೆ ಕುಳಿತು ಕೊಳ್ಳುವ ಎಂದರೆ ಇಲ್ಲಿ ವ್ಯವಸ್ಥೆ ಇಲ್ಲ. ಕೆಲವರು ಜಗಲಿಯ ತಡೆಗೋಡೆ ಆಧರಿಸಿ ನಿಂತರೆ ವಯೋವೃದ್ಧರಿಗೆ ಹಾಗೆ ನಿಲ್ಲಲು ಸಾಧ್ಯವಾಗುವುದಿಲ್ಲ. ಈ ವೇಳೆ ಸೊಳ್ಳೆಗಳು ದಾಳಿ ಮಾಡುತ್ತವೆ. ಅತ್ಯಗತ್ಯಕ್ಕೆಂದು ಇಲ್ಲಿನ  ಟಾಯ್ಲೆಟ್‌ಗೆ ತೆರಳಿದರೆ ವಾಸನೆಯಿಂದ ಮೂಗು ಮುಚ್ಚುವ ಸ್ಥಿತಿಯೂ ಇದೆ.

ಜಿಲ್ಲೆಯ ಪ್ರಧಾನ ಕೇಂದ್ರವಾದ ಜಿಲ್ಲಾಧಿಕಾರಿ ಕಚೇರಿಯ ಪರಿಸರದಲ್ಲೇ ಈ ರೀತಿಯ ಅವ್ಯವಸ್ಥೆಯಾದರೆ ಉಳಿದ ಕಡೆಗಳಲ್ಲಿ ಹೇಗಿರಬಹುದು ಎಂಬುದು ಜನರ ಪ್ರಶ್ನೆ. ಮಳೆಗಾಲಪೂರ್ವ ಶುಚೀ ಕರಣ ಎಂಬ ಕಾಟಾಚಾರದ ಶುಚೀಕರಣ ವರ್ಷಂಪ್ರತಿ ನಡೆದರೂ ಪ್ಲಾಸ್ಟಿಕ್‌ಗಳನ್ನು ಹೆಕ್ಕುವುದು ಬಿಟ್ಟರೆ ಇತರ ಯಾವುದೇ ಶುಚೀಕರಣ ನಡೆಯುತ್ತಿಲ್ಲವೆಂಬ ಆರೋಪವಿದೆ. ಅಧಿಕಾರಿ ವರ್ಗ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಜನರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಾಗಿದೆ. 

Leave a Reply

Your email address will not be published. Required fields are marked *

You cannot copy content of this page