ಪ್ರಾಣಕ್ಕೆ ಅಪಾಯ: ಪೊಲೀಸರಿಂದ ರಕ್ಷಣೆ ಬೇಡಿದ ನಟಿ ಗೌತಮಿ
ಚೆನ್ನೈ: ತನ್ನ ಪ್ರಾಣಕ್ಕೆ ಬೆದರಿಕೆಯಿದೆ ಎಂದು ಸೂಚಿಸಿ ನಟಿ ಹಾಗೂ ರಾಜಕೀಯ ಕಾರ್ಯಕರ್ತೆ ಗೌತಮಿ ಪೊಲೀಸರಿಂದ ಸಂರಕ್ಷಣೆ ಆಗ್ರಹಿಸಿದ್ದಾರೆ. ತನ್ನ ಜೀವಕ್ಕೆ ಸಂರಕ್ಷಣೆ ಬೇಕೆಂದು ಗೌತಮಿ ಚೆನ್ನೈ ಪೊಲೀಸ್ ಕಮಿಷನರ್ರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಆಸ್ತಿ ಸಂಬಂಧವಾದ ವಿವಾದದಲ್ಲಿ ಬೆದರಿಕೆ ಉಂಟಾಗಿದೆ ಎಂದು ನಟಿ ತಿಳಿಸಿದ್ದಾರೆ. ಚೆನ್ನೈಯ ನೀಲಂಗ ರೈಯಲ್ಲಿರುವ ಗೌತಮಿಯ 9 ಕೋಟಿ ರೂ. ಮೌಲ್ಯದ ಸೊತ್ತಿಗೆ ಸಂಬಂಧಿಸಿದ ವಿವಾದ ಈಗಲೂ ನೆಲೆಗೊಂಡಿದೆ. ಈ ಸೊತ್ತು ಅಳಗಪ್ಪನ್ ಎಂಬವರು ಅನಧಿಕೃತವಾಗಿ ಕೈವಶಪಡಿಸಿರುವುದಾಗಿ ಆರೋಪಿಸಿ ಗೌತಮಿ ಈ ಮೊದಲು ದೂರು ನೀಡಿದ್ದರು. ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ವಿವಾದ ಭೂಮಿಗೆ ಬೇಲಿ ಕಟ್ಟಿ ಮೊಹರು ಹಾಕಲಾಗಿತ್ತು. ಈ ಸಮಸ್ಯೆಯಲ್ಲಿ ಈಗ ಗೌತಮಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಹೇಳಲಾಗುತ್ತಿದೆ.