ಪ್ಲಸ್‌ಟು ವಿದ್ಯಾರ್ಥಿಗಳು ಆತ್ಮಹತ್ಯೆ
ಕಲ್ಲಿಕೋಟೆ: ವಡಗರ ವಿಲ್ಯಪಳ್ಳಿ ಎಂಬಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವಡಗರ ಪುತ್ತೂರು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಅನನ್ಯ (17) ನೇಣು ಬಿಗಿದು ಮೃತಪಟ್ಟವಳು. ನಿನ್ನೆ ಸಂಜೆ 6.30ರ ವೇಳೆ ಘಟನೆ ನಡೆದಿದೆ. ನಿನ್ನೆ ಪ್ಲಸ್ ಟು ಪರೀಕ್ಷೆ ಆರಂಭಗೊಂಡ ದಿನವಾಗಿದೆ. ಪರೀಕ್ಷಾ ಭಯ ಆತ್ಮಹತ್ಯೆಗೆ ಕಾರಣವೋ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ತಿರುವನಂತಪುರದಲ್ಲಿ ನಿನ್ನೆ ಬೆಳಿಗ್ಗೆ ಪ್ಲಸ್ ಟು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಮನೆಯ ಮಗಲುವ ಕೊಠಡಿಯಲ್ಲಿ ಮೃತದೇಹ ಕಂಡು ಬಂದಿತ್ತು. ಮಧ್ಯಾಹ್ನ ಪರೀಕ್ಷೆ ಆರಂಭಗೊಳ್ಳಲಿರುವಂತೆ ಈ ಘಟನೆ ನಡೆದಿದೆ. ರತೀಶ್- ರಾಜಲಕ್ಷ್ಮಿ ದಂಪತಿ ಪುತ್ರ ದರ್ಶನ್ ಆತ್ಮಹತ್ಯೆಗೈದ ವಿದ್ಯಾರ್ಥಿ.