ಬದಿಯಡ್ಕ ಗಣೇಶ ಮಂದಿರದಲ್ಲಿ ‘ಮಾತೆ-ಮಾತೃತ್ವ’ ಕಾರ್ಯಕ್ರಮ
ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ ಕಾಸರಗೋಡು ನಗರ, ಬದಿಯಡ್ಕದ ಗಣೇಶ ಮಂದಿರ ಶಾಖೆಯ ಆಶ್ರಯದಲ್ಲಿ ಮಾತೃಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ ಜರಗಿತು. ಭಜನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನೇತ್ರಾವತಿ ವಲಯ ಸಂಯೋಜಕ ಜಯರಾಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀರಾಮಚಂದ್ರಾಪುರ ಮಠದ ಮಾತೃಪ್ರಧಾನೆ ಈಶ್ವರಿ ಚೇರ್ಕಡವು ಮಾತನಾಡಿ ಮಾತೆ ಹಾಗೂ ಮಾತೃತ್ವದ ಕುರಿತು ಮಾತನಾಡಿದರು. ಗಣೇಶ ಮಂದಿರ ಶಾಖೆಯ ಸಹ ಸಂಚಾಲಕಿ ಲಲಿತ ಅಧ್ಯಕ್ಷತೆ ವಹಿಸಿದ್ದರು.
ಅಗ್ನಿಹೋತ್ರ ಪ್ರಮುಖ ಸತ್ಯಜಾತ `ನಗುವೆ ಯೋಗ’ ನಡೆಸಿಕೊಟ್ಟರು. ವಿಸ್ತರಣಾ ಪ್ರಮುಖ ಕುಮಾರ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ನಗರ -ಪ್ರಾಂತ ಪ್ರಮುಖರು, ವಲಯ ಪ್ರಮುಖರು, ಯೋಗ ಬಂಧುಗಳು, ಪಾಲ್ಗೊಂಡಿದ್ದರು. ಮಾತೃ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.