ಬದಿಯಡ್ಕ, ಮಂಜೇಶ್ವರ, ಬೇಕಲ ಠಾಣೆ ವ್ಯಾಪ್ತಿಯಿಂದ ಮೂವರು ಯುವತಿಯರು, ಒಂದು ಮಗು ನಾಪತ್ತೆ

ಕಾಸರಗೋಡು: ಕಾಸರಗೋಡು, ಬೇಕಲ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯಿಂದ ಮೂವರು ಯುವತಿಯರು ಹಾಗೂ ಮೂರರ ಹರೆಯದ ಮಗು ನಾಪತ್ತೆಯಾದ ಘಟನೆ ನಡೆದಿದೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶೇಣಿ ಬಲ್ತಕಲ್ಲು ನಿವಾಸಿ ಚಿತ್ರಕಲಾ (37) ಹಾಗೂ ಮೂರರ ಹರೆಯದ ಪುತ್ರಿ ಜುಲೈ ೧ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪತಿ ಬಿ. ಗಂಗಾಧರ  ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬೇಕಲ ಪುದಿಯ ಭಗವತಿ ಕ್ಷೇತ್ರ ಸಮೀಪದ ಸಂಗೀತ (21) ಶನಿವಾರ ನಾಪತ್ತೆಯಾಗಿದ್ದಾಳೆ.  ಅಂದು ಸಂಜೆ 6 ಗಂಟೆಗೆ ಮನೆಯಿಂದ ಹೊರಗೆ ಹೋದ ಬಳಿಕ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ ಯುವತಿ ಎರ್ನಾಕುಳಂನಲ್ಲಿರುವುದಾಗಿ ಸೂಚನೆ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಏದಾರು ನಿವಾಸಿ ವಾಸಂತಿ ಎಂಬವರ ಪುತ್ರಿ ಅಶ್ವಿನಿ (29) ಶನಿವಾರದಿಂದ ನಾಪತ್ತೆಯಾಗಿದ್ದಾಳೆ.ಅಂದು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಪುತ್ರಿ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಅಶ್ವಿನಿ ಕಾಞಂಗಾಡ್ ಭಾಗದಲ್ಲ್ಲಿ ರುವುದಾಗಿ ಸೂಚನೆ ಲಭಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page