ಬದಿಯಡ್ಕ ಶ್ರೀನಿಧಿ ಕ್ಲಿನಿಕ್‌ನಲ್ಲಿ ಕಷಾಯ ವಿತರಣೆ

ಬದಿಯಡ್ಕ: ಡಾ| ಶ್ರೀನಿದಿs ಸರಳಾಯ ಅವರು ಆಟಿ ಅಮಾ ವಾಸ್ಯೆಯಂದು ಜನರಿಗೆ ಆಟಿ ಕಷಾಯ ವನ್ನು ಉಚಿತವಾಗಿ ವಿತರಿಸುತ್ತಿದ್ದು, ಈ ಬಾರಿ ಇಂದು ಬೆಳಿಗ್ಗೆ ಕ್ಲಿನಿಕ್‌ನಲ್ಲಿ ವಿತರಿಸಲಾಯಿತು. ನಾಡಿನ ವಿವಿಧೆಡೆ ಗಳಿಂದ ಅನೇಕರು ಆಗಮಿಸಿ ಕಷಾಯ ಸೇವಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಗೋಪಾಲ ಕೃಷ್ಣ ಕುಲಾಲ್ ವಾಂತಿಚ್ಚಾಲು ಮಾತನಾಡಿ, ನಾಡಿನ ಜನರ ಆರೋಗ್ಯದ ಬಗ್ಗೆ ಕಾಳಜಿಯಿರುವ ವೈದ್ಯರು ಆಟಿಕಷಾಯ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಡಾ| ಶ್ರೀನಿದಿs ಸರಳಾಯ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಪ್ರತೀ ವರ್ಷ ಆಟಿಕಷಾಯ ವಿತರಣೆಗೆ ಸಹಕರಿಸುತ್ತಿರುವ ವಿಶ್ವನಾಥ ಬಾರಡ್ಕ ಅವರ ಪರವಾಗಿ ಪುತ್ರ ಶ್ರೀಶಾನ್ ಬಾರಡ್ಕರನ್ನು ಗೌರವಿಸಲಾಯಿತು. ದೀಕ್ಷಿತ್ ಬದಿಯಡ್ಕ, ಡಾ| ವಿಕ್ರಂ ಕೌಶಿಕ್, ಶಿವಪ್ರಸಾದ್ ಬೆದ್ರಡಿ ಸಹಕರಿಸಿದರು. ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ರಾಘವೇಂದ್ರ ಅಮ್ಮಣ್ಣಾಯ ಹಾಗೂ ಹಲವರು ಕಷಾಯ ಸೇವಿಸಿದರು.

Leave a Reply

Your email address will not be published. Required fields are marked *

You cannot copy content of this page