ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಸೌಖ್ಯ ಕಾಣಿಸಿಕೊಂಡ ವ್ಯಕ್ತಿ ಆಸ್ಪತ್ರೆಗೆ ತೆರಳುತ್ತಿದ್ದಂತೆ ಮೃತ್ಯು
ಉಪ್ಪಳ: ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದಾಗ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧದಲ್ಲೇ ಇಳಿದು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿ ದ್ದಂತೆ ವ್ಯಕ್ತಿ ಮೃತಪಟ್ಟ ಘಟನೆ ನಡೆ ದಿದೆ. ಹೊಸಂಗಡಿ ಬಳಿಯ ವಾಮಂ ಜೂರು ನಿವಾಸಿ ದಿ| ಬಡುವನ್ ಕುಂಞಿಯವರ ಪುತ್ರ ಅಬ್ದುಲ್ ಹಮೀದ್ (೪೯) ಎಂಬವರು ಮೃತಪಟ್ಟ ವ್ಯಕ್ತಿ.
ನಿನ್ನೆ ಬೆಳಿಗ್ಗೆ ಇವರು ಮನೆ ಯಿಂದ ಸಹೋದರ ಮೊಹಮ್ಮದ್ ಅಶ್ರಫ್‌ರೊಂದಿಗೆ ಕುಂಬಳೆಗೆ ತೆರಳಲೆಂದು ಬಸ್‌ನಲ್ಲಿ ಪ್ರಯಾಣಿ ಸಿದ್ದಾರೆ. ಆರಿಕ್ಕಾಡಿಗೆ ತಲುಪಿದಾಗ ಅಬ್ದುಲ್ ಹಮೀದ್‌ರಿಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಆದ್ದರಿಂದ ಕೂಡಲೇ ಬಸ್ ನಿಂದಿಳಿದು ಆಟೋ ರಿಕ್ಷಾದಲ್ಲಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಷ್ಟರೊಳಗೆ ನಿಧನ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾಮಂಜೂರು ಬದ್ರಿಯ ಜುಮಾ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಾಯಿ ನಬೀಸ, ಪತ್ನಿ ಆಸ್ಮ, ಪುತ್ರ ಆಶಿಲ್, ಸಹೋದರ-ಸಹೋದರಿಯರಾದ ಮೊಹಮ್ಮದ್ ಅಶ್ರಫ್, ಸಿದ್ದಿಕ್, ಮರಿಯಮ್ಮ, ಖದೀಜಮ್ಮ, ನಸೀಮ, ರಸಿಯಾ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.