ಬಸ್‌ನಿಂದ ಎರಡು ಬ್ಯಾಟರಿ ಕಳವು: ಆರೋಪಿಗಳಿಗಾಗಿ ಶೋಧ
ಕಾಸರಗೋಡು: ಸಂಚಾರ ಮುಗಿಸಿದ ಬಳಿಕ ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್‌ನ ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗೆ ಕಯ್ಯೂರಿನಲ್ಲಿ ನಿಲ್ಲಿಸಿದ್ದ ಶ್ರೀಕೃಷ್ಣ ಬಸ್‌ನ ಬ್ಯಾಟರಿಗಳನ್ನು ಕಳವುಗೈಯ್ಯಲಾಗಿದೆ.
ಸಂಚಾರ ಕೊನೆಗೊಳಿಸಿ ಎಂದಿನಂತೆ ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಲಾಗಿತ್ತು. ಮರುದಿನ ಬೆಳಿಗ್ಗೆ ಬಸ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಎರಡು ಬ್ಯಾಟರಿಗಳು ಕಳವಿಗೀಡಾಗಿರುವುದು ತಿಳಿದು ಬಂದಿದೆ. ಇವುಗಳಿಗೆ 28,000 ರೂ. ಮೌಲ್ಯ ಅಂದಾಜಿಸಲಾಗಿದೆ. ಈ ಬಗ್ಗೆ ಕಂಡಕ್ಟರ್ ಶ್ರೀಜಿತ್ ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿ ದ್ದಾರೆ. ಆರೋಪಿಗಳ ಪತ್ತೆಗಾಗಿ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾ ಗಳನ್ನು ಪರಿಶೀಲಿಸಲಾಗುತ್ತಿದೆ.