ಬಸ್ನೊಳಗೆ ಕುಸಿದುಬಿದ್ದು ಪ್ರಯಾಣಿಕ ಸಾವು
ಕಾಸರಗೋಡು: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.
ಮೃತರನ್ನು ತಲಪ್ಪಾಡಿ ಕುದ್ರು ತಲಪ್ಪಾಡಿಯ ವಿಜಯಾ ಬ್ಯಾಂಕ್ ಶಾಖೆ ಸಮೀಪದ ಕಲ್ಪಕ ಹೌಸ್ ರಸ್ತೆ ಬಳಿಯ ರವೀಂದ್ರ (65) ಎಂಬವರೆಂದು ಗುರುತಿಸ ಲಾಗಿದೆ. ಇವರು ನಿನ್ನೆ ಮಧ್ಯಾಹ್ನ ಕಾಸರಗೋಡು ಹಳೆ ಬಸ್ ನಿಲ್ದಾಣದಿಂದ ಬಸ್ಸೇರಿದ್ದು, ಬಸ್ ನಗರದ ಪ್ರೆಸ್ ಕ್ಲಬ್ ರಸ್ತೆ ಬಳಿ ತಲುಪಿದಾಗ ಅವರು ಅದರೊಳಗೆ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.