ಬಸ್ ಕಂಡೆಕ್ಟರ್ ನಿಧನ
ಪೈವಳಿಕೆ: ಕುದ್ರೆಕೋಡ್ಲು ನಿವಾಸಿ ಗಂಗಾಧರರವರ ಪುತ್ರ ಬಸ್ ಕಂಡೆÀಕ್ಟರ್ ಹರೀಶ (45) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳಿಂದ ಉಪ್ಪಳ-ಬಾಯಾರು ಮಧ್ಯೆ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಹಲವು ತಿಂಗಳುಗಳಿAದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ವಸಂತಿ, ಸಹೋದರ ರಾಧಾಕೃಷ್ಣ, ಸಹೋದರಿಯರಾದ ಶ್ರೀಲತಾ, ಮಮತಾ, ಗೀತಾ, ಜ್ಯೋತಿ, ಸುಮನ, ಸ್ಮಿತಾ ಹಾಗೂ ಅಪಾರ ಬಂಧು- ಸ್ನೇಹಿತರನ್ನು ಅಗಲಿದ್ದಾರೆ. ಅಂತ್ಯಸAಸ್ಕಾರ ನಿನ್ನೆ ಸಂಜೆ ಮನೆ ಪರಿಸರದಲ್ಲಿ ನಡೆಯಿತು. ಉಪ್ಪಳ-ಬಾಯಾರು ರೂಟ್ನ ಬಸ್ ಸಿಬ್ಬಂದಿ ವರ್ಗ, ಮಾಲಕರು ಸಹಿತ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಉಪ್ಪಳ ಬಸ್ ಏಜಂಟರ್ಗಳು, ಬಸ್ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.