ಬಸ್ ನಿಲ್ದಾಣದಲ್ಲಿ ಜಾನುವಾರುಗಳ ಹಾವಳಿ: ಪ್ರಯಾಣಿಕರಿಗೆ ಸಮಸ್ಯೆ

 ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದಲ್ಲಿ ಜಾನುವಾರುಗಳು ಮಲಗುತ್ತಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದ ಬಗ್ಗೆ ದೂರಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಇಲ್ಲಿ ಜಾನುವಾರುಗಳು ತುಂಬಿರುತ್ತಿದ್ದು, ಇದರಿಂದ ಬಸ್‌ಗೆ ಹತ್ತಬೇಕಾದರೆ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಬೇಡಿಕೆ ತೀವ್ರಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page