ಬಾಲಕನಿಗೆ ಸಲಿಂಗರತಿ ಕಿರುಕುಳ : ಓರ್ವ ಆರೋಪಿ ಸೆರೆ
ಕಾಸರಗೋಡು: 14ರ ಹರೆಯ ದ ಬಾಲಕನನ್ನು ಬೈಕ್‌ನಲ್ಲಿ ಕರೆದು ಕೊಂಡು ಹೋಗಿ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರ ಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಕುಂಟಿಕಾನ ನಿವಾಸಿ ಸಲ್ಮಾನ್ ಫಾರಿಸಿ ಅಬ್ದುಲ್ಲ (23) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಿದ್ದು ಆತನ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಬಾಲಕನನ್ನು ಬೈಕ್‌ನಲ್ಲಿ ಆಲಂಪಾಡಿ ಪರಿಸರದ ಪೊದೆಯೊಂ ದಕ್ಕೆ ಕರೆದೊಯ್ದು ಆಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ವಿದ್ಯಾ ನಗರ ಪೊಲೀಸರು ಇಬ್ಬರ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.