ಬಾಲಗೋಕುಲದಿಂದ ಗುರುವಿಗೆ ಗೌರವ
ಕಾಸರಗೋಡು: ಎಡನೀರು ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಗೋಪಾಲಕೃಷ್ಣ ಭಟ್ ಎಸ್ ಇವರನ್ನು ವ್ಯಾಸ ಪೂರ್ಣಿಮೆಯ ದಿನದಂದು ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ವತಿಯಿಂದ ಗೌರವಿಸಲಾಯಿತು.
ಎಡನೀರು ಸ್ವಾಮೀಜೀಸ್ ಹೈಸ್ಕೂಲ್ನಲ್ಲಿ ಇವರು ೨೬ ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಗೌರವಾರ್ಪಣೆ ವೇಳೆ ಪತ್ನಿ ಜಯಲಕ್ಷ್ಮಿ ಭಟ್ ಜೊತೆಗಿದ್ದರು.
ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಶಾಲು ಹೊದಿಸಿ ಗುರುವಂದನೆ ಸಲ್ಲಿಸಿದರು. ಬಾಲಗೋಕುಲದ ಅಧ್ಯಕ್ಷ ಮೋದಕ್ ರಾಜ್ ಸೂರ್ಲು, ಗಣೇಶ್ ಮಾವಿನಕಟ್ಟೆ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.