ಬೈಕ್ ಅಪಘಾತದಲ್ಲಿ ಯುವಕ ಮೃತ್ಯು

ಕಾಸರಗೋಡು: ಮಲೆನಾಡ ಹೆದ್ದಾರಿ ವೆಳ್ಳೇರಿಕುಂಡ್ ಕಾರ್ಯೋಟುಚಾಲ್ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾರೆ.  ಚುಳ್ಳಿ ಚರ್ಚ್ ಬಳಿಯ ನಿವಾಸಿ ಮೂನ್ನ್ ಪೀಡಿಗದ ಜೋಮಿ ಎಂಬವರ ಪುತ್ರ ಜೆಸ್ಟಿನ್ (26) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 8 ಗಂಟೆ ವೇಳೆ ಜೆಸ್ಟಿನ್ ಚಲಾಯಿಸಿದ ಬೈಕ್ ನಿಯಂತ್ರಣ  ತಪ್ಪಿಹೊಂಡಕ್ಕೆ ಬಿದ್ದು ಅಪಘಾತ ವುಂಟಾಗಿದೆ. ಗಂಭೀರಗಾಯಗೊಂಡ ಅವರನ್ನು ನಾಗರಿಕರು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರ ತಂದೆ, ತಾಯಿ ಶಿಜಿ, ಸಹೋದರರಾದ ಜೆರಿನ್, ಜಿಬಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page