ಬೈಕ್ ಕಳವು: ಅಪ್ರಾಪ್ತ ಸೇರಿ ಮೂವರ ಸೆರೆ
ಕಾಸರಗೋಡು: ಬೈಕ್ ಕಳವು ಪ್ರಕರಣದ ಆರೋಪಿಗಳಾದ ಮೂರು ಮಂದಿಯನ್ನು ವಿದ್ಯಾನಗರ ಪೊಲೀಸರು ಸೆರೆಹಿಡಿದಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತನಾಗಿದ್ದಾನೆ. ಆಲಂಪಾಡಿ ಮಿನಿ ಎಸ್ಟೇಟ್ ಬಳಿಯ ನಿವಾಸಿ ಮೊಯ್ದೀನ್ ಫಾಸಿಲ್ (19), ಕಲ್ಲಕಟ್ಟ ಪಟ್ಲ ಹೌಸ್‌ನ ಮುಹಮ್ಮದ್ ಮುಸ್ತಫ (19) ಹಾಗೂ ವಿದ್ಯಾನಗರ ಠಾಣಾ ವ್ಯಾಪ್ತಿಯ ೧೭ರ ಹರೆಯದ ಅಪ್ರಾಪ್ತನನ್ನು ಕಣ್ಣಪುರ ಎಸ್‌ಐ ಕೆ. ರಾಜೀವ್ ಎನ್ ನೇತೃ ತ್ವದ ತಂಡ ಸೆರೆಹಿಡಿದಿದೆ. ಚೆರುಕುನ್ನು ಇಟ್ಟಂಮ್ಮಲ್‌ನಿಂದ ರೋಯಲ್ ಬುಲ್ಲೆಟ್ ಬೈಕ್‌ನ್ನು ತಂಡ ಕಳವು ನಡೆಸಿತ್ತು. ಈ ತಿಂಗಳ 11ರಂದು ಕಣ್ಣಪುರ ರೈಲು ನಿಲ್ದಾಣ ದಲ್ಲಿ ಈ ಬೈಕ್ ನಿಲ್ಲಿಸಿ ಮಲಪ್ಪುರಂಗೆ ತಂಡ ಸಂಚರಿಸಿದೆ. ಬಳಿಕ 13ರಂದು ಹಿಂತಿ ರುಗಿದಾಗ ಬೈಕ್ ನಾಪತ್ತೆಯಾದ ಬಗ್ಗೆ ತಿಳಿದುಬಂದಿದ್ದು, ಅದರಂತೆ ಕಣ್ಣಪುರಂ ಪೊಲೀಸರಿಗೆ ದೂರು ನೀಡಿತ್ತು. ಸಿಸಿ ಟಿವಿ ದೃಶ್ಯವನ್ನು ಪರಿಶೀ ಲಿಸಿದಾಗ 3 ಮಂದಿ ಕಾಸರ ಗೋಡು ಭಾಷೆಯಲ್ಲಿ ಮಾತನಾಡುತ್ತಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾನಗರ ಠಾಣೆಯ ಪೊಲೀಸ್ ವಿಜಿನ್‌ರ ನೇತೃತ್ವದಲ್ಲಿ ತನಿಖೆ ನಡೆಸಿ ದಾಗ ಕಳವು ಪ್ರಕರಣ ಬೆಳಕಿಗೆ ಬಂ ದಿದೆ. ಈ ಆರೋಪಿಗಳ ವಿರುದ್ಧ ನೀಲೇಶ್ವರ ಠಾಣೆಯಲ್ಲೂ ಬೈಕ್ ಕಳವು ಪ್ರಕರಣ ದಾಖಲಾಗಿದ್ದು, ಕಣ್ಣಪುರಂ ರೈಲ್ವೇ ನಿಲ್ದಾಣದಿಂದಲೂ ಒಂದು ಬೈಕ್‌ನ್ನು ಕಳವುಗೈದಿದ್ದು, ಅದು ಈ ತಂಡವೇ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.