ಬ್ಯಾಂಕ್ ಸೆಕ್ರೆಟರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೊಲ್ಲಂ: ಬ್ಯಾಂಕ್ ಸೆಕ್ರೆಟರಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೇರಳಪುರಂ ಪುನೈಕನ್ನೂರ್ ಆಯಿರತ್ತಿಲ್ ಮನೆಯಲ್ಲಿ ರಜಿತಾ ಮೋಳ್ (48) ಮೃತಪಟ್ಟ ಯುವತಿ. ಪುನೈಕನ್ನೂರ್ ಸೇವಾ ಸಹಕಾರಿ ಬ್ಯಾಂಕ್ ಕಾರ್ಯ ದರ್ಶಿಯಾಗಿದ್ದಾರೆ ರಜಿತಾ ಮೋಳ್. ನಿನ್ನೆ ರಾತ್ರಿ ಇವರನ್ನು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದೆ. ಆದರೆ ಮರಣಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಪತಿ ವಿದೇಶದಲ್ಲಿದ್ದು, ಪುತ್ರ ಕಲ್ಲಿಕೋಟೆಯಲ್ಲಿ ವಿದ್ಯಾರ್ಥಿ ಯಾಗಿ ದ್ದಾನೆ. ಏಕಾಂಗಿಯಾಗಿ ಇವರು ಮನೆಯಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ. ಕುಂಡರ ಪೊಲೀಸರು ಸ್ಥಳಕ್ಕೆ ತಲುಪಿ ಮುಂದಿನ ಕ್ರಮ ಕೈಗೊಂಡಿದ್ದಾರೆ.